National

ಎಲ್ಲಾ ರಾಜ್ಯಗಳಲ್ಲೂ ಎನ್‌ಐಎ ಶಾಖೆ ಸ್ಥಾಪನೆ; ಗೃಹ ಸಚಿವ ಅಮಿತ್‌ ಶಾ

ನವದೆಹಲಿ; ದೇಶದಲ್ಲಿ ರಾಷ್ಟ್ರೀಯ ತನಿಖಾ ದಳವನ್ನು ಬಲಗೊಳಿಸಲು ನಿರ್ಧರಿಸಲಾಗಿದೆ. ಮುಂದಿನ ಎರಡು ವರ್ಷಗಳೊಳಗೆ ಪ್ರತಿ ರಾಜ್ಯದಲ್ಲೂ ಎನ್‌ಐಎ ಶಾಖೆ ಸ್ಥಾಪನೆ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ. ಹರಿಯಾಣದ ಸೂರಜ್‌ ಕುಂಡ್‌ನಲ್ಲಿ ಎರಡು ದಿನಗಳ ಚಿಂತನಾ ಶಿಬಿರ ನಡೆಯುತ್ತಿದೆ. ಅದರಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸೈಬರ್‌ ಕ್ರೈಂ, ಡ್ರಗ್ಸ್‌, ಭಯೋತ್ಪಾದನೆ ಸೇರಿ ಎಲ್ಲಾ ರೀತಿಯ ಅಪರಾಧಗಳನ್ನು ಮಟ್ಟ ಹಾಕಲು ಜಂಟಿಯಾಗಿ ಆಲೋಚಿಸಲು ಈ ಚಿಂತನಾ ಶಿಬಿರ ನಮ್ಮೆಲ್ಲರಿಗೂ ಸಹಕಾರಿಯಾಗಿದೆ ಎಂದು ಅಮಿತ್‌ ಶಾ ಇದೇ ವೇಳೆ ತಿಳಿಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ನಂತರ ಅಲ್ಲಿನ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆ ಶೇ.34ರಷ್ಟು ಕಡಿಮೆಯಾಗಿದೆ ಎಂದು ಅಮಿತ್‌ ಶಾ ಇದೇ ವೇಳೆ ತಿಳಿಸಿದರು.

Share Post