ಸರ್ಕಾರಿ ನಿವಾಸ ತೊರೆಯಲು ಮೆಹಬೂಬಾ ಮುಫ್ತಿಗೆ ಸೂಚನೆ
ಶ್ರೀನಗರ; ಸರ್ಕಾರಿ ಬಂಗಲೆಯನ್ನು ತೊರೆಯುವಂತೆ ಪಿಡಿಪಿ ಮುಖ್ಯಸ್ಥೆ ಹಾಗೂ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಗೆ ಜಮ್ಮು ಮತ್ತು ಕಾಶ್ಮೀರದ ಎಸ್ಟೇಟ್ ಇಲಾಖೆ ಆದೇಶ ನೀಡಿದೆ. ಪರ್ಯಾಸ ವಸತಿ ಒದಗಿಸಿಕೊಡುತ್ತೇವೆ, ಫೇರ್ವ್ಯೂ ನಿವಾಸ ತೊರೆಯುವಂತೆ ಸೂಚನೆ ನೀಡಲಾಗಿದೆ.
ಈ ಹಿಂದೆ ಜಮ್ಮು ಮತ್ತು ಕಾಶ್ಮೀರದ ಎಲ್ಲ ಮಾಜಿ ಮುಖ್ಯಮಂತ್ರಿಗಳಿಗೆ ಶಾಶ್ವತ ವಸತಿ ಒದಗಿಸಲಾಗುತ್ತಿತ್ತು. ಆದ್ರೆ ಕಾನೂನು ತಿದ್ದುಪಡಿ ನಂತರ ಈ ಸೌಲಭ್ಯವನ್ನು ತೆಗೆಯಲಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ, ಗುಲಾಂ ನಬಿ ಅಜಾದ್ ತಮ್ಮ ನಿವಾಸಗಳನ್ನು ಎರಡು ವರ್ಷದ ಹಿಂದೆಯೇ ತೊರೆದಿದ್ದಾರೆ. ಆದ್ರೆ ಮೆಹಬೂಬ ಮುಫ್ತಿ ಇನ್ನೂ ನಿವಾಸ ತೊರೆದಿರಲಿಲ್ಲ. ಹೀಗಾಗಿ ನಿವಾಸ ತೊರೆಯುವಂತೆ ಸೂಚಿಸಲಾಗಿದೆ.