ನೂತನ ವಾಯುನೆಲೆಗೆ ಪ್ರಧಾನಿ ಮೋದಿ ಶಂಕು ಸ್ಥಾಪನೆ
ಗಾಂಧಿನಗರ; ನೂತನ ವಾಯು ನೆಲೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಗುಜರಾತ್‌ನ ಭಾರತ-ಪಾಕಿಸ್ತಾನ ಗಡಿಯಲ್ಲಿ ಈ ವಾಯು ನೆಲೆ ಸ್ಥಾಪನೆಯಾಗಲಿದೆ. ಬನಾಸಕಾಂಠಾ ಜಿಲೆಯಲ್ಲಿ ಡೀಸಾದಲ್ಲಿ ನೂತನ ವಾಯುನೆಲೆ ನೆಲೆಗೊಳ್ಳಲಿದ್ದು, ಇದು ದೇಶದ ಭದ್ರತೆಗೆ ಅತ್ಯಂತ ಪ್ರಭಾವಶಾಲಿ ಕೇಂದ್ರವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಡಿಫೆನ್ಸ್ ಎಕ್ಸ್‌ಪೋ ಉದ್ಘಾಟಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಆಮದು ಮಾಡಿಕೊಳ್ಳಲಾಗದ 101 ರಕ್ಷಣಾ ಸರಕುಗಳನ್ನು ಬಿಡುಗಡೆ ಮಾಡುತ್ತಿದ್ದೇವೆ. ಇದರಿಂದಾಗಿ 411 ರಕ್ಷಣಾ ಉತ್ಪನ್ನಗಳನ್ನು ದೇಶೀಯವಾಗಿ ಖರೀದಿಸಬಹುದು ಎಂದು ಪ್ರಧಾನಿ ಹೇಳಿದ್ದಾರೆ.