Districts

ಭಾರಿ ಮಳೆ ಹಿನ್ನೆಲೆ; ಮೈಸೂರು ಅರಮನೆ ಕೋಟೆ ಗೋಡೆ ಕುಸಿತ

ಮೈಸೂರು; ಮೈಸೂರು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅರಮನೆ ಕಾಂಪೌಂಡ್‌ ಗೋಡೆಗೆ ಕುತ್ತು ಬಂದಿದೆ. ಅರಮನೆಯ ಆವರಣದ ಕೋಟೆ ಗೋಡೆ ಸ್ವಲ್ಪ ಭಾಗ ಕುಸಿತವಾಗಿದ್ದು, ಮತ್ತಷ್ಟು ಕುಸಿಯುವ ಆತಂಕ ಎದುರಾಗಿದೆ.

ಮೈಸೂರು ಅರಮನೆಯ ಕೋಟೆ ಮಾರಮ್ಮ ದೇಗುಲ ಮತ್ತು ಜಯ ಮಾರ್ತಾಂಡ ದ್ವಾರದ ಮಧ್ಯದಲ್ಲಿ ಬರುವ ಗೋಡೆ ಸ್ವಲ್ಪ ಭಾಗ ರಾತ್ರಿ ಕುಸಿದಿದೆ. ಅರಮನೆಯ ರಕ್ಷಣೆಗಾಗಿ ಅರಮನೆಯ ಸುತ್ತಲೂ ಈ ಕೋಟೆ ನಿರ್ಮಿಸಲಾಗಿತ್ತು. ಇದು ಸಾಕಷ್ಟು ಹಳೆಯದಾಗಿರುವುದರಿಂದ ಕುಸಿಯಲು ಶುರುವಾಗಿದೆ.

 

Share Post