Districts

ದರ್ಶನ ನೀಡಿದ ಹಾಸನಾಂಬೆ; ಹಾಸನಾಂಬ ಜಾತ್ರೆಗೆ ವಿಧ್ಯುಕ್ತ ಚಾಲನೆ

ಹಾಸನ; ವರ್ಷಕ್ಕೊಮ್ಮೆ ದರ್ಶನ ನೀಡಿರುವ ಹಾಸನಾಂಬ ದೇವಾಲಯದ ಬಾಗಿಲನ್ನು ಇಂದು ತೆರೆಯಲಾಗಿದೆ. ಧಾರ್ಮಿಕ ವಿಧಿ ವಿಧಾನಗಳ‌‌ ಮೂಲಕ ಇಂದು ಮಧ್ಯಾಹ್ನ 12.14 ಕ್ಕೆ ದೇಗುಲದ ಬಾಗಿಲು ತೆರೆಯಲಾಗಿದ್ದು, ಇಂದಿನಿಂದ 12 ದಿನಗಳ ಕಾಲ ಹಾಸನಾಂಬೆ ಭಕ್ತರಿಗೆ ದರ್ಶನ ನೀಡಲಿದ್ದಾರೆ.

ಇಂದಿನಿಂದ ಅಕ್ಟೋಬರ್‌ 27 ರವರೆಗೆ ಹಾಸನಾಂಬ ದೇವಾಲಯ ಓಪನ್‌ ಇರಲಿದೆ. ಈ ಬಾರಿ 15 ದಿನಗಳ ಕಾಲ ದೇಗುಲದ ಬಾಗಿಲು ತೆರೆದಿರಲಿದ್ದು, 12 ದಿನಗಳ ಕಾಲ ಭಕ್ತರಿಗೆ ದೇವಿಯ ದರ್ಶನ ಸಿಗಲಿದೆ. ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಾಗೂ ಮಧ್ಯಾಹ್ನ 4 ರಿಂದ ರಾತ್ರಿ 10 ರವರೆಗೆ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಅದಕ್ಕಾಗಿ ಸಲಕ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಶೇಷ ದರ್ಶನ ವ್ಯವಸ್ಥೆ ಕೂಡಾ ಇದ್ದು, ಒಬ್ಬರಿಗೆ 300 ರೂಪಾಯಿ ಹಾಗೂ 1000 ರೂಪಾಯಿಯ ವಿಶೇಷ ಟಿಕೆಟ್‌ಗಳನ್ನು ನೀಡಲಾಗುತ್ತಿದೆ.

Share Post