CrimeNational

ಮೂವರು ಹೆಣ್ಣುಮಕ್ಕಳ ಜೊತೆ ಕರ್ನಾಟಕದ ಮಹಿಳೆ ಆತ್ಮಹತ್ಯೆ

ಬೆಳಗಾವಿ; ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಬಿಳ್ಳೂರ ಗ್ರಾಮದ ಮಹಿಳೆ ಹಾಗೂ ಆಕೆಯ ಮೂವರು ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಮೃತ ಮಹಿಳೆ ಬೆಳಗಾವಿಯ ಜಿಲ್ಲೆಯ ಅಥಣಿ ತಾಲ್ಲೂಕಿನವರಾಗಿದ್ದು, ಮಹಾರಾಷ್ಟ್ರ ವ್ಯಕ್ತಿಯನ್ನು ಮದುವೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ನೆಲೆಸಿದ್ದರು.

ಸುನೀತಾ ತುಕಾರಾಮ ಮಾಳಿ (27) ಹಾಗೂ ಆಕೆಯ ಮಕ್ಕಳಾದ ಅಮೃತಾ ತುಕಾರಾಮ ಮಾಳಿ (13), ಅಂಕಿತಾ ತುಕಾರಾಮ ಮಾಳಿ (10), ತುಕಾರಾಮ ಮಾಳಿ (7)  ಆತ್ಮ,ಹತ್ಯೆ ಮಾಡಿಕೊಂಡವರು. ನಾಲ್ವರೂ ನಾಲ್ಕು ದಿನಗಳಿಂದ ಕಾಣಿಸುತ್ತಿರಲಿಲ್ಲ. ಆದರೆ ಅವರು ನಾಲ್ಕು ದಿನದ ನಂತರ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

 ಸೋಮವಾರ ಬಿಳ್ಳೂರ ಗ್ರಾಮದ ಹೊರವಲಯದ ಕೆರೆಯಲ್ಲಿ ನಾಲ್ವರ ಮೃತ ದೇಹಗಳು ತೇಲುತ್ತಿದ್ದುದನ್ನು ಸ್ಥಳೀಯರು ನೋಡಿ ಪೊಲೀಸರಿಗೆ ತಿಳಿಸಿದ್ದಾರೆ.

Share Post