CrimeNational

ಲೈಕ್ಸ್‌, ಕಮೆಂಟ್ಸ್‌ಗಾಗಿ ಜಗಳ; ಇಬ್ಬರ ಕೊಲೆ

ನವದೆಹಲಿ; ಇನ್‍ಸ್ಟಾಗ್ರಾಮ್‍ನಲ್ಲಿ ಲೈಕ್ಸ್ ಮತ್ತು ಕಾಮೆಂಟ್ಸ್ ವಿಚಾರಕ್ಕೆ ಶುರುವಾದ ಜಗಳ‌ ಇಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ. ನವದೆಹಲಿಯ ಭಾಲ್ಸ್ವಾ ಡೈರಿ ಬಳಿ ಈ ಘಟನೆ ನಡೆದಿದೆ.

ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ಮಹಿಳೆ ವಿಚಾರಕ್ಕೆ ದೆಹಲಿಯ ಹೊರಭಾಗದಲ್ಲಿರುವ ಭಾಲ್ಸ್ವಾ ಡೈರಿಯಲ್ಲಿ ಇಬ್ಬರು ವ್ಯಕ್ತಿಗಳನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ.

ಮುಕುಂದಪುರ ಭಾಗ-2 ಪ್ರದೇಶದಲ್ಲಿ ತನ್ನನ್ನು ಭೇಟಿಯಾಗುವಂತೆ ಮಹಿಳೆ ಇಬ್ಬರಿಗೂ ಹೇಳಿದ್ದಳು. ಆದರೆ ಅಲ್ಲಿಗೆ ಬಂದಾಗ ದಾಳಿ ನಡೆದಿದೆ. ಅನೇಕ ಬಾರಿ ಚಾಕುವಿನಿಂದ ಇರಿದಿದ್ದರಿಂದ ವ್ಯಕ್ತಿ ಇಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದ್ದರು.

Share Post