CrimeDistricts

ಕಾಂಗ್ರೆಸ್‌ ಯುವ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ

ಹುಬ್ಬಳ್ಳಿ; ಗುಂಪು ಕಟ್ಟಿಕೊಂಡು ಬಂದು ಮನೆ ಮುಂದೆ ನಿಲ್ಲಬೇಡ ಎಂದಿದ್ದಕ್ಕೆ ರೊಚ್ಚಿಗೆದ್ದ ವ್ಯಕ್ತಿಯೊಬ್ಬ ಯುವ ಕಾಂಗ್ರೆಸ್‌ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹುಬ್ಬಳ್ಳಿಯ ಸೋನಿಯಾಗಾಂಧಿ ನಗರದ ನಿಜಾಮುದ್ದಿನ್‌ ಪ್ಲಾಟ್‌ನಲ್ಲಿ ನಡೆದಿದೆ.

  ಕಾಂಗ್ರೆಸ್ ಯುವ ಮುಖಂಡ ತೌಸಿಫ್ ಲಕ್ಕುಂಡಿ ಮಾರಣಾಂತಿಕ ಹಲ್ಲೆಗೊಳಗಾದ ವ್ಯಕ್ತಿ. ಇತ್ತೀಚೆಗಷ್ಟೇ ಸೋನಿಯಾ ಗಾಂಧಿ ನಗರದಲ್ಲಿ ಮನೆ ಮಾಡಿದ್ದ ತೌಸಿಫ್ ಮನೆಯ ಬಳಿ ಪದೇ ಪದೆ ಐದಾರು ಜನರೊಂದಿಗೆ ಬಂದು ನಿಲ್ಲುತ್ತಿದ್ದ ಇಸ್ಮಾಯಿಲ್​ ಎಂಬುವರ ನಡುವೆ ವಾಗ್ವಾದ ನಡೆದಿತ್ತು. ಇದನ್ನೇ ಹಗೆ ಸಾಧಿಸಿದ ಇಸ್ಮಾಯಿಲ್ ನಿನ್ನೆ ರಾತ್ರಿ ತೌಸಿಫ್​​ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ತೌಸಿಫ್​ ಅವರನ್ನು ಚಿಕಿತ್ಸೆಗಾಗಿ ಕಿಮ್ಸ್​​ಗೆ ದಾಖಲಿಸಲಾಗಿದೆ. ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

Share Post