ಪಿಎಫ್‌ಐ ಸಂಘಟನೆಯ ಟ್ವಿಟರ್, ಫೇಸ್‌ಬುಕ್, ಇನ್ಸ್ಟಾ ಖಾತೆ ಡಿಲೀಟ್
ನವದೆಹಲಿ; ಪಿಎಫ್‌ಐ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದ ಬೆನ್ನಲ್ಲೇ ಅದರ ಟ್ವಿಟರ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳನ್ನು ಡಿಲೀಟ್ ಮಾಡಲಾಗಿದೆ. ಭಾರತದಲ್ಲಿ ಮೆಟಾ ಒಡೆತನದ ಫೇಸ್‌ಬುಕ್ ಮತ್ತು ಟ್ವಿಟರ್ ಈ ಕ್ರಮ ಕೈಗೊಂಡಿವೆ. ಅಲ್ಲದೇ ಪಿಎಫ್‌ಐ ಸಂಘಟನೆಯ ಮುಖಂಡರ ಟ್ವಿಟರ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳ ಖಾತೆಯನ್ನೂ ಡಿಲೀಟ್ ಮಾಡಲಾಗಿದೆ.
@PFIofficial ಟ್ವಟಿರ್ ಖಾತೆಯನ್ನು ಅಳಸಲಾಗಿದ್ದು, 81,000 ಬೆಂಬಲಿಗರು ಇದಕ್ಕೆ ಇದ್ದರು. ಇದನ್ನು ನಿರ್ವಹಿಸುವ ಇಸ್ಲಾಮಿಕ ಸಂಘಟನೆಯ ಮುಖಂಡರಿಗೂ 81,000 ಬೆಂಬಲಿಗರು ಇದ್ದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಕೇಂದ್ರ ಸರ್ಕಾರವು ಐದು ವರ್ಷಗಳ ಅವಧಿಗೆ ಬುಧವಾರ ನಿಷೇಧಿಸಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.