CrimeDistricts

ನವೋದಯ ಮೆಡಿಕಲ್‌ ಕಾಲೇಜಿನಲ್ಲಿ ಜಗಳ; ರಾಡ್‌ನಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ..!

ರಾಯಚೂರು; ರಾಯಚೂರು ನಗರದ ಹೊರವಲಯದಲ್ಲಿರುವ ನವೋದಯ ಮೇಡಿಕಲ್ ಕಾಲೇಜಿನಲ್ಲಿ ಇಬ್ಬರು ವಿದ್ಯಾರ್ಥಿಗಳ ಮೇಲೆ ತೀವ್ರವಾಗಿ ಹಲ್ಲೆ ನಡೆದಿದೆ. ಕ್ಲಾಸ್‌ ರೂಮ್‌ನಲ್ಲಿ ಪ್ರಾಧ್ಯಾಪಕರ ಮುಂದೆಯೇ ಈ ಜಗಳ ನಡೆದಿದೆ. ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಲಾಗಿದ್ದು, ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

  ಘಟನೆಯಲ್ಲಿ ಒಬ್ಬ ವಿದ್ಯಾರ್ಥಿಯ ತಲೆಗೆ ಪೆಟ್ಟು ಬಿದ್ದಿದೆ. ಹೀಗಾಗಿ 12 ಹೊಲಿಗೆ ಹಾಕಲಾಗಿದೆ. ಮತ್ತೋರ್ವನ ಹಣೆಗೆ ಗಾಯವಾಗಿದೆ. ಶಂಕರ್ ಮತ್ತು ಶಂಬುಲಿಂಗ ಗಾಯಗೊಂಡಿರುವ ವಿದ್ಯಾರ್ಥಿಗಳು. ನವೋದಯ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

  ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿ ರೋಹಿತ್ ಎಂಬಾತನೇ ಆರೋಪಿ. ರೋಹಿತ್ ತನ್ನ ತಾಯಿಯ ಬರ್ತ್‌ಡೇ‌ ಫೋಟೋ ಸ್ಟೇಟಸ್ ಹಾಕಿದ್ದನ್ನು ಸಹಪಾಠಿಗಳಾದ ಶಂಕರ್ ಹಾಗೂ ಶಂಭುಲಿಂಗ ದುರ್ಬಳಕೆ ಮಾಡಿಕೊಂಡಿದ್ದರು. ಫೋಟೋ ಸ್ಕ್ರೀನ್ ಶಾಟ್ ತೆಗೆದು ಹಾರ್ಟ್‌ ಸಿಂಬಲ್ ಮೂಲಕ ವೈರಲ್ ಮಾಡಿದ್ದರಂತೆ. ಈ ಕಾರಣಕ್ಕೆ ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ.

Share Post