BengaluruPolitics

ಬಿಜೆಪಿ ಅಸಲಿ ಹೆಸರು ಸುಳ್ಳಿನ ಪಾರ್ಟಿ; ಕಾಂಗ್ರೆಸ್‌ ನಾಯಕರಿಂದ ಲೇವಡಿ

ಬೆಂಗಳೂರು; ʻಬಿಜೆಪಿಯ ಅಸಲಿ ಹೆಸರು ಸುಳ್ಳಿನ ಪಾರ್ಟಿ. ಬಿಜೆಪಿ ಅಂದರೆ ಬಿಗ್ ಟ್ರೇಡ್ ಜನತಾ ಪಾರ್ಟಿ. ಬಿಜೆಪಿ ಎಂದರೆ ಬೇಕೂಫ್ ಜನತಾ ಪಾರ್ಟಿ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಂದೀಪ್‌ ಸುರ್ಜೇವಾಲಾ ಲೇವಡಿ ಮಾಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಮಠಗಳಿಂದ ಮೂವತ್ತು ಪರ್ಸೆಂಟ್‌ ಕಮೀಷನ್‌ ಪಡೆಯಲಾಗುತ್ತಿದೆ. ಗುತ್ತಿಗೆದಾರರಿಂದ ನಲವತ್ತು ಪರ್ಸೆಂಟ್‌ ಹಾಗೂ ಕಾರ್ಯಕರ್ತರಿಂದ ಐವತ್ತು ಪರ್ಸೆಂಟ್‌ ಕಮೀಷನ್‌ ಪಡೆಯಲಾಗುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಬಿಜೆಪಿ ಸರ್ಕಾರ ಕಮೀಷನ್ ಅನ್ನು ವಿವಿಧ ಹಂತಗಳಲ್ಲಿ ಪಡೆಯುತ್ತಿದೆ. ದೇಶದಲ್ಲೇ ಇದು ದೊಡ್ಡ ಭ್ರಷ್ಟಾಚಾರ ರಾಜ್ಯ. ಇಲ್ಲಿ ನಾಯಕತ್ವ ಇಲ್ಲಿ ಬಿದ್ದು ಹೋಗಿದೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಸುರ್ಜೇವಾಲಾ ಕಿಡಿ ಕಾರಿದ್ದಾರೆ. ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಈ ವೇಳೆ ನಮ್ಮ ಸರ್ಕಾರ ಹಲವಾರು ಭಾಗ್ಯ ಯೋಜನೆಗಳನ್ನು ಜಾರಿ ಮಾಡಿತ್ತು. ನಾವು ನೀಡಿದ ಭರವಸೆಗಳಲ್ಲಿ ಶೇ.91 ರಷ್ಟು ಭರವಸೆಗಳನ್ನು ಈಡೇರಿಸಿದ್ದೆವು. ಆದ್ರೆ ಈಗಿನ ಸರ್ಕಾರ ಎಲ್ಲರದಲ್ಲೂ ಎಡವಿದೆ. ರೈತರ ಬೆಳೆಗೆ ಎಂಎಸ್‌ಪಿ ನಿಗದಿ ಮಾಡಲಿಲ್ಲವೇಕೆ..? ದಲಿತ,ಒಬಿಸಿಗಳ ಸ್ಕಾಲರ್ ಶಿಪ್ ಏನಾಯ್ತು?, ಬಡವರಿಗೆ ಮನೆ ಕಟ್ಟಿಕೊಡ್ತೇವೆಂದಿದ್ದು ಎಲ್ಲಿ? ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಡಬಲ್‌ ಎಂಜಿನ್‌ ಸರ್ಕಾರ ಏನು ಉತ್ತರ ಕೊಡಲಿದೆ ಎಂದು ಸುರ್ಜೇವಾಲಾ ಪ್ರಶ್ನೆ ಮಾಡಿದರು.

ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಪರಿಶಿಷ್ಟರಿಗೆ ೪೫೦೦ ಕೋಟಿ ಕೊಡ್ತೇವೆ ಎಂದಿದ್ದಿರಿ. ಎಲ್ಲಿ ಕೊಟ್ಟಿದ್ದೀರಿ ಎಂದು ಪ್ರಶ್ನೆ ಮಾಡಿದರು. ನಾವು ಬೇರೆ ಭಾಷಿಕರನ್ನ ವಿರೋಧಿಸಲ್ಲ. ನೋಟಿನಲ್ಲೇ ಕನ್ನಡ ಭಾಷೆ ಬಳಸಲಾಗಿದೆ. ಆದರೆ ಕನ್ನಡಕ್ಕೆ ನೀವು ಬೆಲೆ ಕೊಡ್ತಿದ್ದೀರಾ?, ಬಿಜೆಪಿಯವರೇ ನಿಮ್ಮ ಹತ್ತಿರ ಇದೆಯೇ ಉತ್ತರ? ಎಂದು ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದರು. ನೀವು ವಚನ ಭಷ್ಟರಾಗಿದ್ದೀರಿ, ಕರ್ನಾಟಕ ದೇಶದ ಭ್ರಷ್ಟಾಚಾರ ರಾಜಧಾನಿಯಾಗಿದೆ ಎಂದು ಕಿಡಿ ಕಾರಿದರು.

ಬಸವಣ್ಣ ನುಡಿದಂತೆ ನಡೆಯಬೇಕೆಂದು ಹೇಳಿದ್ದರು. ನಾವು ನುಡಿದಂತೆ ನಡೆದಿದ್ದೇವೆ. ನೀವು ನುಡಿದಂತೆ ನಡೆಯುತ್ತಿದ್ದೀರಾ ಎಂದು ಡಿ.ಕೆ.ಶಿವಕುಮಾರ್‌ ಬಿಜೆಪಿ ನಾಯಕರಿಗೆ ಪ್ರಶ್ನೆ ಮಾಡಿದರು. ಯಡಿಯೂರಪ್ಪ ಜನರಿಗೆ ವಚನ ಕೊಟ್ಟಿದ್ದರು. ಕೊಟ್ಟ ವಚನ ಈಡೇರಿಸಿದ್ದೀರಾ..?. ನಾವು ಬಿಜೆಪಿಯವರಿಗೆ ಪ್ರಶ್ನೆ ಕೇಳ್ತೇವೆ. ಇದಕ್ಕೆ ಉತ್ತರ ಕೊಡಿ ನೋಡೋಣ ಎಂದು ಡಿಕೆಶಿ ಶ್ನೆ ಮಾಡಿದರು. ೧೦೦ ಬಾರಿ ಸುಳ್ಳು ಹೇಳಿ ನಿಜ ಮಾಡಿದವರು ನೀವು. ಈಶ್ವರಪ್ಪನವರೇ ಇದನ್ನ ಹೇಳಿದ್ದಾರೆ. ನಾವು ಪ್ರತಿದಿನ ನಿಮಗೆ ಒಂದೊಂದು ಪ್ರಶ್ನೆ ಕೇಳುತ್ತೇವೆ. ಅದಕ್ಕೆ ಉತ್ತರ ಕೊಡಿ ಎಂದು ಆಗ್ರಹಿಸಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ೨೦೧೩ ರಲ್ಲಿ ನಾವು ಪ್ರಣಾಳಿಕೆ ಹೊರಡಿಸಿದ್ದೆವು. ಜನ ಆಗ ನಮಗೆ ಅವಕಾಶ ಕೊಟ್ಟಿದ್ದರು. ಪ್ರಣಾಳಿಕೆಯಲ್ಲಿ ಹೇಳಿದ್ದ ಭರವಸೆಗಳನ್ನೆಲ್ಲಾ ಈಡೇರಿಸಿದೆವು. ನಾವು ೧೬೫ ಭರವಸೆ ಜನರಿಗೆ ನೀಡಿದ್ದೆವು. ೧೫೮ ಭರವಸೆಗಳನ್ನ ನಾವು ಈಡೇರಿಸಿದ್ದೆವು. ೨೦೧೮ರಲ್ಲಿ ಬಿಜೆಪಿಯವರು ಪ್ರಣಾಳಿಕೆ ಹೊರಡಿಸಿದ್ದರು. ಬಿಜೆಪಿಯವರು ಪ್ರಣಾಳಿಕೆಯನ್ನು ವಚನಗಳೆಂದಿದ್ದರು. ೬೦೦ ವಚನಗಳನ್ನ ಅವರು ಕೊಟ್ಟಿದ್ದರು. ೬೦೦ ರಲ್ಲಿ ಎಷ್ಟು ವಚನಗಳನ್ನ ಈಡೇರಿಸಿದ್ದಾರೆ?. ಶೇಕಡಾ ಹತ್ತರಷ್ಟನ್ನೂ ಈಡೇರಿಸಿಲ್ಲ ಎಂದು ಕಿಡಿಕಾರಿದರು. ಬಿಜೆಪಿಯವರು ಜನರಿಗೆ ಶೇಕಡಾ ೯೦ರಷ್ಟು ಭರವಸೆಗಳನ್ನು ಈಡೇರಿಸದೇ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.

Share Post