ತೆಲಂಗಾಣ ಶಾಸಕ ರಾಜಾಸಿಂಗ್ ಮತ್ತೆ ಬಂಧನ
ಹೈದರಾಬಾದ್; ಇಸ್ಲಾಂ ಧರ್ಮ ಮತ್ತು ಪ್ರವಾದಿ ಮಹಮ್ಮದ್ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ತೆಲಂಗಾಣ ಬಿಜೆಪಿ ಶಾಸಕ ರಾಜಾಸಿಂಗ್ ಮತ್ತೆ ಬಂಧಿತರಾಗಿದ್ದಾರೆ. ನಿನ್ನೆಯಷ್ಟೇ ಅವರನ್ನು ಜಾಮೀನನಡಿ ಬಿಡುಗಡೆ ಮಾಡಲಾಗಿತ್ತು. ಇದೀಗ ಮತ್ತೆ ಅವರನ್ನು ಬಂಧಿಸಲಾಗಿದೆ.
ಈ ಹಿಂದೆ ಅವರನ್ನು ಮಂಗಳವಾರ ಬಂಧಿಸಲಾಗಿತ್ತು. ಅದರ ಬೆನ್ನಲ್ಲೇ ಬಿಜೆಪಿ ಅವರನ್ನು ಪಕ್ಷದಿಂದ ಅಮಾನತುಪಡಿಸಿತ್ತು. ಬಂಧನವಾದ ಕೆಲವೇ ಗಂಟೆಗಳಲ್ಲಿ ಅವರು ಬಿಡುಗಡೆಯಾಗಿದ್ದರು. ರಾಜಾ ಸಿಂಗ್ ಅವರಿಗೆ ನೋಟಿಸ್ ನೀಡದೆ ಪೊಲೀಸರು ಬಂಧಿಸಿದ್ದರು. ಇದರಿಂದ ಕಾನೂನು ಸೂಕ್ತವಾಗಿ ಪರಿಪಾಲನೆಯಾಗಿಲ್ಲ ಎಂದು ಸಿಂಗ್ ಅವರ ವಕೀಲರು ಸ್ಥಳೀಯ ಕೋರ್ಟ್ನಲ್ಲಿ ವಾದ ಮಂಡಿಸಿದ್ದರು. ಹಾಗಾಗಿ, ಸಿಂಗ್ ಅವರ ಬಿಡುಗಡೆಗೆ ಕೋರ್ಟ್ ಆದೇಶ ನೀಡಿತ್ತು.
ಬಿಡುಗಡೆ ಮಾಡಿರುವುದಕ್ಕೆ ಭಾರಿ ಆಕ್ಷೇಪ ವ್ಯಕ್ತವಾಗಿತ್ತು. ಹೈದರಾಬಾದ್ನ ಹಳೆ ನಗರ ಪ್ರದೇಶಗಳಲ್ಲಿ ಬುಧವಾರ ಪ್ರತಿಭಟನೆಗಳು ನಡೆದಿದ್ದವು.