BengaluruDistricts

ಎಸಿಬಿ ರದ್ದು ವಿಚಾರ; ಸರ್ಕಾರದಿಂದ ಮೇಲ್ಮನವಿ ಇಲ್ಲ ಎಂದ ಸಿಎಂ

ದೊಡ್ಡಬಳ್ಳಾಪುರ; ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳ ರದ್ದು ಸಂಬಂಧ ಹೈಕೋರ್ಟ್‌ ಆದೇಶ ನಾವು ಪಾಲಿಸುತ್ತೇವೆ. ಅದರ ವಿರುದ್ಧ ಸುಪ್ರೀಂ ಕೋರ್ಟ್‌ ಮೊರೆ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ಮಾತನಾಡಿದ ಅವರು, ಎಸಿಬಿ ವಿಚಾರವಾಗಿ ಹೈಕೋರ್ಟ್ ಆದೇಶ ಪಾಲನೆ ಪ್ರಕ್ರಿಯೆ ಆರಂಭ ಆಗಿದೆ. ಸರ್ಕಾರದಿಂದ ಸುಪ್ರೀಂ ಮೊರೆ ಹೋಗಿಲ್ಲ. ಖಾಸಗಿ ವ್ಯಕ್ತಿ ಮೇಲ್ಮನವಿ ಹೋಗಿರೋದಕ್ಕೂ ನಮಗೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.

Share Post