ಇಂದು ಬಾಲಿವುಡ್ ನಟಿ ಶ್ರೀದೇವಿ ಜನ್ಮದಿನ; ಅಮ್ಮನನ್ನು ನೆನಪಿಸಿಕೊಂಡ ಪುತ್ರಿಯರು
ಮುಂಬೈ; ಇಂದು ಬಾಲಿವುಡ್‌ನ ಖ್ಯಾತ ನಟಿ ಶ್ರೀದೇವಿ ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ಅವರ ಪುತ್ರಿಯರು ಶ್ರೀದೇವಿಯನ್ನು ನೆನಪಿಸಿಕೊಂಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಹಂಚಿಕೊಂಡು ಅಮ್ಮನ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಜಾನ್ವಿ ಕಪೂರ್ ತನ್ನ ದಿವಂಗತ ತಾಯಿಯೊಂದಿಗಿನ ಹಳೇ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ಜಾನ್ವಿ ಹೃದಯ ಸ್ಪರ್ಶಿ ಸಂದೇಶವನ್ನೂ ಸಹ ಬರೆದಿದ್ದಾರೆ.
‘ಹುಟ್ಟುಹಬ್ಬದ ಶುಭಾಶಯಗಳು ಮಮ್ಮಾ, ನಾನು ನಿನ್ನನ್ನು ಪ್ರತಿದಿನ ಹೆಚ್ಚು ಹೆಚ್ಚು ಕಳೆದುಕೊಳ್ಳುತ್ತೇನೆ. ನಾನು ನಿನ್ನನ್ನು ಯಾವಾಗಲೂ ಪ್ರೀತಿಸುವೆನು’ ಎಂದು ಜಾನ್ವಿ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದಲ್ಲದೇ, ಶ್ರೀದೇವಿ ಅವರ ಕಿರಿಯ ಮಗಳು ಖುಷಿ ಕಪೂರ್ ಕೂಡ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.