Districts

ಚಿಕ್ಕಬಳ್ಳಾಪುರದಲ್ಲಿ ತಿರಂಗಾ ವಾಕಥಾನ್‌; ರಾರಾಜಿಸಿದ 2500 ಅಡಿ ತ್ರಿವರ್ಣ ಧ್ವಜ

ಚಿಕ್ಕಬಳ್ಳಾಪುರ; 75 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ದೇಶದೆಲ್ಲೆಡೆ ಈಗಾಗಲೇ ಶುರುವಾಗಿದೆ. ಎಲ್ಲೆಲ್ಲೂ ರಾಷ್ಟ್ರ ಧ್ವಜಗಳು ರಾರಾಜಿಸುತ್ತಿವೆ. ಹರ್‌ ಘರ್‌ ತಿರಂಗಾ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದೆ. ಜನರಲ್ಲಿ ಜಾಗೃತಿ ಹಾಗೂ ಪ್ರೇರೇಪಣೆ ಮೂಡಿಸುವ ಸಲುವಾಗಿ ಇಂದು ಚಿಕ್ಕಬಳ್ಳಾಪುರ ನಗರದಲ್ಲಿ 2,500 ಅಡಿ ಉದ್ದದ ತಿರಂಗಾ ಯಾತ್ರೆ ನಡೆಸಲಾಯಿತು.

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ವತಿಯಿಂದ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ನೇತೃತ್ವದಲ್ಲಿ 2,500 ಅಡಿ ಉದ್ದದ ತ್ರಿವರ್ಣ ಧ್ವಜದ ವಾಕಥಾನ್ ನಡೆಸಲಾಗಿಯಿತು.  ಎಂಜಿ ರಸ್ತೆಯ ಜೈ ಭೀಮ್ ವಿದ್ಯಾರ್ಥಿನಿಲಯದಿಂದ ಬಿಬಿ ರಸ್ತೆಯ ಮೂಲಕ ಸಾಗಿ ಒಕ್ಕಲಿಗರ ಕಲ್ಯಾಣಮಂಟಪದ ಬಳಿ ವಾಕಥಾನ್ ಅಂತ್ಯವಾಯಿತು. ಈ ವಾಕಥಾನ್‍ನಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಆಗಸ್ಟ್ 13 ರಿಂದ 15 ರವರೆಗೆ ದೇಶದಲ್ಲಿ ಹರ್ ಘರ್ ತಿರಂಗಾ ಅಭಿಯಾನ ನಡೆಯಲಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಇಂದು ಆಯೋಜಿಸಿದ್ದ ವಾಕಥಾನ್ ಇಡೀ ನಗರದ ಗಮನ ಸೆಳೆಯಿತು.

Share Post