ಗುಂಡು ಹಾರಿಸಿಕೊಂಡು ಬಿಎಸ್‌ಎಫ್ ಯೋಧ ಆತ್ಮಹತ್ಯೆ
ಜಮ್ಮು; ಬಿಎಸ್‌ಎಫ್‌ನಲ್ಲಿ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ನಡೆದಿದೆ. ರಾಜಸ್ಥಾನ ಮೂಲದವರಾದ ರಾಮದೇವ್ ಸಿಂಗ್ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಎಂದು ತಿಳಿದುಬಂದಿದೆ.
ಇಂದು ಬೆಳಗ್ಗೆ 6.35ರ ಸುಮಾರಿಗೆ ಸಹೋದ್ಯೋಗಿಯೊಬ್ಬರು ರಾಮದೇವ್ ಅವರ ಕೊಠಡಿಗೆ ಹೋದಾಗ, ಅವರು ಗನ್ ಜೊತೆ ರಕ್ತದ ಮಡುವಿನಲ್ಲಿ ಸತ್ತು ಬಿದ್ದಿರುವುದು ಪತ್ತೆಯಾಗಿದೆ. ಮೃತ ಎಸ್‌ಐ 12ನೇ ಬೆಟಾಲಿಯನ್‌ಗೆ ಸೇರಿದವರಾಗಿದ್ದು, ಬಿಎಸ್‌ಎಫ್ ಪ್ಲೆಟೋನ್ ಒಂದನ್ನು ಮುನ್ನಡೆಸುತ್ತಿದ್ದರು. ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಮೃತಪಟ್ಟಿರಬಹು ಎಂದು ಅಧಿಕಾರಿಗಳು ತಿಳಿಸಿದ್ದಾರೆ.