CrimeNational

ಬ್ಯಾಗ್‌ನಲ್ಲಿ ಬಾಂಬ್‌ ಇದೆ ಎಂದು ಬೆದರಿಸಿದ; ವಿಮಾನ ಸಿಬ್ಬಂದಿ ಮಾಡಿದ್ದೇನು ಗೊತ್ತಾ..?

ಪಾಟ್ನಾ; ಟೇಕಾಫ್‌ ಆಗಿದ್ದ ವಿಮಾನದಲ್ಲಿ ಕುಳಿತಿದ್ದ ವ್ಯಕ್ತಿ ನನ್ನ ಬ್ಯಾಗ್‌ನಲ್ಲಿ ಬಾಂಬ್‌ ಇದೆ ಅಂದ್ರೆ ಅಲ್ಲಿದ್ದವರ ಪರಿಸ್ಥಿತಿ ಹೇಗಾಗಬೇಡ ಅಲ್ಲವೇ..?. ಅಂತಹದ್ದೊಂದು ಘಟನೆ ಪಾಟ್ನಾದಲ್ಲಿ ನಡೆದಿದೆ. ಇಂಡಿಗೋ ವಿಮಾನ 6E- 2126 ಪಾಟ್ನಾದಿಂದ ದೆಹಲಿಯತ್ತ ಹೊರಟಿತ್ತು. ಇದೇ ವೇಳೆಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ರಿಷಿ ಚಂದ್‌ ಸಿಂಗ್‌ ಬೇಡಿ ಎಂಬಾತ, ಸಹಪ್ರಯಾಣಿಕರಿಗೆ ನನ್ನ ಬ್ಯಾಗ್‌ನಲ್ಲಿ ಬಾಂಬ್‌ ಇದೆ ಎಂದು ಹೇಳಿದ್ದಾನೆ. ಇದರಿಂದ ಗಾಬರಿಗೊಂಡ ಪ್ರಯಾಣಿಕರು, ವಿಮಾನ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದರು. ಇದ್ರಿಂದಾಗಿ ಆತಂಕದ ವಾತಾವರಣ ಸೃಷ್ಟಿಯಾಯಿತು. ಕೂಡಲೇ ವಿಮಾನವನ್ನು ಪಾಟ್ನಾದಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು.

ವಿಮಾನವನ್ನು ಲ್ಯಾಂಡಿಂಗ್‌ ಮಾಡಿದ ನಂತರ ಪರಿಶೀಲನೆ ಮಾಡಲಾಯಿತು. ಆದ್ರೆ ಯಾವುದೇ ಬಾಂಬ್‌ ಪತ್ತೆಯಾಗಲಿಲ್ಲ. ಪ್ರಯಾಣಿಕರ ರಿಷಿ ಸುಳ್ಳು ಹೇಳಿ ಆತಂಕ ಸೃಷ್ಟಿಸಿದ್ದ. ಇನ್ನು ಆರೋಪಿ ರಿಷಿ ಜೊತೆ ಅವರ ಸಂಬಂಧಿಕರೂ ಇದ್ದರು. ಅವರು ರಿಷಿಯನ್ನು ಹಿಡಿದು ಥಳಿಸಿದ್ದಾರೆ ಎನ್ನಲಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆತ ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದೆ.

 

Share Post