ಮಗಳನ್ನೇ ಹತ್ಯೆ ಮಾಡಲು ಸುಪಾರಿ; ಬಿಹಾರದ ಮಾಜಿ ಶಾಸಕ ಅರೆಸ್ಟ್
ಪಾಟ್ನಾ; ಮರ್ಯಾದಾ ಹತ್ಯೆಗಳ ದೇಶದಲ್ಲಿ ನಡೆಯುತ್ತಲೇ ಇರುತ್ತವೆ. ತಿಳಿದವರು, ವಿದ್ಯಾವಂತರೇ ಇಂತಹ ಕೃತ್ಯಗಳನ್ನು ನಡೆಸುತ್ತಿರುತ್ತಾರೆ. ಅದೇ ರೀತಿ ಸ್ವಂತ ಮಗಳನ್ನೇ ಕೊಲ್ಲಿಸಲು ಸುಪಾರಿ ನೀಡಿದ್ದ ಬಿಹಾರದ ಮಾಜಿ ಶಾಸಕ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಮಗಳು ಅನ್ಯ ಜಾತಿಯ ಹುಡುಗನನ್ನು ಮದುವೆಯಾಗಿದ್ದಾಳೆ ಎಂಬ ಕಾರಣಕ್ಕೆ ಮಗಳನ್ನು ಹತ್ಯೆ ಮಾಡಲು ಮಾಜಿ ಶಾಸಕ ಸುರೇಂದ್ರ ಶರ್ಮಾ ಎಂಬುವವರು ಸುಪಾರಿ ನೀಡಿದ್ದರು. ಪೊಲೀಸರಿಗೆ ಈ ಮಾಹಿತಿ ಗೊತ್ತಾಗಿ ಮಾಜಿ ಶಾಸಕನನ್ನು ಬಂಧಿಸಿದ್ದಾರೆ.
ಮಾಜಿ ಶಾಸಕ ಸುರೇಂದ್ರ ಶರ್ಮಾ ಅವರು 20 ಲಕ್ಷ ರೂ. ನೀಡಿರುವುದಾಗಿ ಸುಪಾರಿ ಕಿಲ್ಲರ್ಸ್ ಸತ್ಯ ಬಾಯ್ಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸುರೇಂದ್ರ ಶರ್ಮಾ ಅರವನ್ನು ಬಂಧಿಸಿರುವುದಾಗಿ ಪಾಟ್ನಾ ಪೊಲೀಸರು ತಿಳಿಸಿದ್ದಾರೆ. ಶ್ರೀ ಕೃಷ್ಣ ಪುರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಸುರೇಂದ್ರ ಶರ್ಮಾ ಮಗಳನ್ನು ಜುಲೈ 1 ಮತ್ತು 2ನೇ ತಾರೀಖು ಮಧ್ಯರಾತ್ರಿ ಕೊಲೆ ಮಾಡಲು ಸುಪಾರಿ ಕಿಲ್ಲರ್ಸ್ ಯತ್ನಿಸಿದ್ದರು. ಆದರೆ ಈ ವೇಳೆ ಗುರಿ ತಪ್ಪಿ ಅಪರಿಚಿತ ವ್ಯಕ್ತಿ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಎಸ್ಕೇಪ್ ಆಗಿದ್ದರು. ನಂತರ ಈ ವಿಚಾರವಾಗಿ ಸುರೇಂದ್ರ ಶರ್ಮಾ ಅವರ ಮಗಳು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಈ ಬಗ್ಗೆ ಶೋಧ ಕಾರ್ಯ ಆರಂಭಿಸಿದ ಪೊಲೀಸರು, ಶನಿವಾರ ಗ್ಯಾಂಗ್‍ನ ಲೀಡರ್ ಅಭಿಷೇಕ್ ಅಲಿಯಾಸ್ ಛೋಟೆ ಸರ್ಕಾರ್ ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಿದ್ದರು.