ನಟ ನರೇಶ್ಗೂ, ಪವಿತ್ರ ಲೋಕೇಶ್ಗೂ ಇರೋ ಸಂಬಂಧ ಏನು..?; ಪವಿತ್ರ ಲೋಕೇಶ್ ಈ ಬಗ್ಗೆ ಹೇಳೋದೇನು..?
ಬೆಂಗಳೂರು; ಪವಿತ್ರ ಲೋಕೇಶ್ ಅವರು ತೆಲುಗು ನಟ ನರೇಶ್ ಅವರನ್ನು ಮದುವೆಯಾಗಿದ್ದಾರಂತೆ ಅನ್ನೋ ಸುದ್ದಿ ಕೆಲದಿನಗಳಿಂದ ಹರಿದಾಡುತ್ತಿದೆ. ಇದು ಹೀಗಿರುವಾಗಲೇ ನರೇಶ್ ಅವರ ಮೂರನೇ ಮತ್ನಿ ರಮ್ಯಾ ಎಂಬುವವರು ಮಾಧ್ಯಮಗಳ ಮುಂದೆ ಬಂದು ಮಾತನಾಡಿದ್ದಾರೆ. ಇದರ ನಡುವೆ ನಟ ನರೇಶ್ ಅವರು ಕೂಡಾ ನಿನ್ನೆ ಬೆಂಗಳೂರಿಗೆ ಬಂದು ಈ ಬಗ್ಗೆ ಸಮಜಾಯಿಷಿ ಕೊಟ್ಟಿದ್ದಾರೆ. ಇದೀಗ ಪವಿತ್ರ ಲೋಕೇಶ್ ಅವರು ಕೂಡಾ ಮೌನ ಮುರಿದಿದ್ದಾರೆ. ತಮ್ಮ ಹೇಳಿಕೆಯನ್ನು ಮಾಧ್ಯಮಗಳ ಮುಂದೆ ದಾಖಲಿಸಿದ್ದಾರೆ.
ರಮ್ಯಾ ಅವರು ಮಾಧ್ಯಮಗಳ ಮುಂದೆ ಬಂದು ನನ್ನ ಪತಿ ನರೇಶ್ ಅವರು ನಟಿ ಪವಿತ್ರಾ ಲೋಕೇಶ್ ಜೊತೆ ಸಂಬಂಧ ಹೊಂದಿದ್ದಾರೆ. ಈ ಕಾರಣದಿಂದಾಗಿಯೇ ನನಗೆ ನರೇಶ್ ಅವರು ಡಿವೋರ್ಸ್ ನೋಟಿಸ್ ಕಳುಹಿಸಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪವಿತ್ರಾ ಲೋಕೇಶ್ ಅವರು, ಯಾರು ಏನು ಹೇಳಿದ್ದಾರೋ ಗೊತ್ತಿಲ್ಲ. ಅಷ್ಟಕ್ಕೂ ರಮ್ಯಾ ಅವರು ನನ್ನ ಬಗ್ಗೆ ಮಾತನಾಡಲು ಯಾರು..? ತನ್ನ ಕುಟುಂಬದ ಬಗ್ಗೆ ಏನಾದರೂ ಹೇಳಿಕೊಳ್ಳಲಿ. ಅದರಲ್ಲಿ ನನ್ನನ್ನು ಎಳೆತಂದಿರುವುದು ಸರಿಯಲ್ಲ ಎಂದಿದ್ದಾರೆ. ನಾನು ಮತ್ತು ನರೇಶ್ ಅವರು ಪರಿಚಯವಾಗಿದ್ದು 4 ವರ್ಷಗಳ ಹಿಂದೆ. ಅವರು ನಾನು ಹ್ಯಾಪಿ ವೆಡ್ಡಿಂಗ್ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದೆವು. ಆಗ ನರೇಶ್ ಯಾರು ಅಂತಾನೇ ಗೊತ್ತಿರಲಿಲ್ಲ. ಎರಡನೇ ಸಿನಿಮಾ ಮಾಡುವಾಗ ಪರಿಚಯವಾದರು. ಅವರು ತಮ್ಮ ವೈಯಕ್ತಿಕ ವಿಚಾರಗಳನ್ನು ನನ್ನ ಜೊತೆ ಹಂಚಿಕೊಳ್ಳುತ್ತಿದ್ದರು. ನಾನೂ ಹಂಚಿಕೊಳ್ಳುತ್ತಿದೆ. ಅಷ್ಟರ ಮಟ್ಟಿಗೆ ನಮ್ಮಲ್ಲಿ ಆತ್ಮಿಯತೆ ಬೆಳೆಯಿತು. ಅದರ ಹೊರತಾಗಿ ಏನೂ ಇಲ್ಲ ಪವಿತ್ರಾ ಲೋಕೇಶ್ ಸ್ಪಷ್ಟಪಡಿಸಿದ್ದಾರೆ.
ನಾನು ನೂರಾರು ಸಿನಿಮಾಗಳನ್ನು ಮಾಡಿದ್ದೇನೆ. ಹಲವಾರು ಕಲಾವಿದರ ಜೊತೆ ನಟಿಸಿದ್ದೇವೆ. ಹಾಗಂತ ಎಲ್ಲರ ಜೊತೆಗೂ ನನಗೆ ಸಂಬಂಧವಿದೆ ಎಂದು ಹೇಳೋಕೆ ಆಗುತ್ತಾ..? ರಮ್ಯಾ ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. ನಾನು ಮತ್ತು ನರೇಶ್ ಏನು ಅಂತ ನಮ್ಮಿಬ್ಬರಿಗೆ ಗೊತ್ತು ಎಂದು ಪವಿತ್ರಾ ಲೋಕೇಶ್ ಇದೇ ವೇಳೆ ಸ್ಪಷ್ಟನೆ ಕೊಟ್ಟಿದ್ದಾರೆ.