BengaluruHealth

ಹಾಸ್ಪಿಟಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಆರಂಭ; ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌

ಬೆಂಗಳೂರು; ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ರೋಗಿಗಳನ್ನು ನಿರ್ವಹಣೆ ಮಾಡುವುದರ ಜೊತೆಗೆ, ಇಡೀ ಆಸ್ಪತ್ರೆಯ ಆಡಳಿತದ ನಿರ್ವಹಣೆ ಮಾಡುವ ನಾಯಕತ್ವ ಹೊಂದಿರಬೇಕು ಎಂಬ ಕನಸಿನೊಂದಿಗೆ ಐಐಎಂಬಿಯಲ್ಲಿ ಹೊಸ ʼಹಾಸ್ಪಿಟಲ್‌ ಮ್ಯಾನೇಜ್‌ಮೆಂಟ್‌ʼ ಕೋರ್ಸ್‌ಗೆ ಚಾಲನೆ ದೊರೆತಿದೆ. ಈ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಪಾಲ್ಗೊಂಡು ಮಾತನಾಡಿದರು.

ಆಸ್ಪತ್ರೆಗಳಲ್ಲಿ ಉತ್ತಮ ಆಡಳಿತವೂ ಅಗತ್ಯ. ಆಡಳಿತದಲ್ಲಿ ದೋಷಗಳಿದ್ದರೆ ಅದು ರೋಗಿಗಳ ಚಿಕಿತ್ಸೆಯ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ. ಐಐಎಂಬಿ ಆರಂಭಿಸಿರುವ ಈ ಕೋರ್ಸ್‌ನಿಂದ ನನ್ನ ಕನಸು ಸಾಕಾರಗೊಂಡಿದೆ. ಕಾರ್ಪೊರೇಟ್‌ ಆಸ್ಪತ್ರೆಗಳು ಉತ್ತಮ ಆಡಳಿತ ವ್ಯವಸ್ಥೆ ಹೊಂದಿವೆ. ಖಾಸಗಿಗೆ ಹೋಲಿಸಿದರೆ, ಸರ್ಕಾರ ತನ್ನ ಆಸ್ಪತ್ರೆಗಳಿಗೆ ಹೆಚ್ಚು ಹಣ ಖರ್ಚು ಮಾಡುತ್ತದೆ. ಆದರೆ ವೈದ್ಯರಿಗೆ ಆಡಳಿತದ ನಿರ್ವಹಣೆಯ ಕೊರತೆ ಇದೆ. ಆದ್ದರಿಂದ ಈ ಹೊಸ ಕೋರ್ಸ್‌ ವೈದ್ಯರಿಗೆ ಬಹಳ ನೆರವಾಗಲಿದೆ. ಈ ಕೋರ್ಸ್‌ನಿಂದ ರಾಜ್ಯ ಮಾತ್ರವಲ್ಲದೆ, ಇಡೀ ದೇಶದ ವೈದ್ಯರಿಗೆ ನೆರವಾಗಲಿದೆ. ಅಲ್ಲದೆ, ರಾಜ್ಯದ ಸರ್ಕಾರಿ ಆರೋಗ್ಯ ಕ್ಷೇತ್ರ ದೊಡ್ಡ ಸುಧಾರಣೆ ಕಾಣಲು ನೆರವಾಗಲಿದೆ ಎಂದು ಸಚಿವ ಸುಧಾಕರ್‌ ಹೇಳಿದರು.

 

Share Post