CrimeDistricts

ಗಂಡನ ಅಕ್ರಮ ಸಂಬಂಧಕ್ಕೆ ಬೇಸರ; ಮಕ್ಕಳೊಂದಿಗೆ ಪತ್ನಿ ಆತ್ಮಹತ್ಯೆ

ಮೈಸೂರು; ಗಂಡ ಅಕ್ರಮ ಸಂಬಂಧ ಹೊಂದಿರುವುದರಿಂದ ಬೇಸತ್ತ ಪತ್ನಿ ತನ್ನ ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಘಟನೆ ನಡೆದಿರೋದು ಟಿ.ನರಸೀಪುರ ಬಳಿಯ ರಾಮೇಗೌಡಪುರ ಗ್ರಾಮದಲ್ಲಿ. ಗ್ರಾಮದ ಸರೋಜಾ (32)  ತನ್ನ ಇಬ್ಬರು ಮಕ್ಕಳಾದ ಗೀತಾ(6), ಕುಸುಮಾಗೂ (4) ನೇಣು ಬಿಗಿದು, ತಾನೂ ನೇಣಿಗೆ ಶರಣಾಗಿದ್ದಾಳೆ.

   ಮಾವಿನಹಳ್ಳಿ ಗ್ರಾಮದ ನಿಂಗರಾಜು ಎಂಬುವರನ್ನು ಸರೋಜಾ ವಿವಾಹವಾಗಿದ್ದರು. ಗಂಡ ನಿಂಗರಾಜುಗೆ ಅಕ್ರಮ ಸಂಬಂಧ ಇರುವ ವಿಷಯ ಕೆಲ ತಿಂಗಳ ಹಿಂದೆ ಸರೋಜಾಗೆ ತಿಳಿದಿತ್ತು. ಇದರಿಂದಾಗಿ ಮನೆಯಲ್ಲಿ ಪದೇ ಪದೆ ಗಲಾಟೆ ನಡೆಯುತ್ತಿತ್ತು. ಕೆಲ ದಿನದ ಹಿಂದೆ ಗಂಡನ ಮನೆಯಿಂದ ಸ್ವಗ್ರಾಮ ರಾಮೇಗೌಡನಪುರ ಆಗಮಿಸಿದ್ದ ಸರೋಜಾ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಕ್ಕಳಿಗೆ ನೇಣು ಹಾಕಿ, ತಾನೂ ನೇಣಿಗೆ ಶರಣಾಗಿದ್ದಾಳೆ.

Share Post