ಉದ್ಧವ್ ತಂದೆ ಹೆಸರು ಯಾಕೆ ಬಳಸ್ತೀರಿ, ನಿಮ್ಮ ತಂದೆ ಹೆಸರು ಬಳಸಿ; ಸಂಜಯ್ ರಾವುತ್
ಮುಂಬೈ; ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾ ಮಂದುವರೆದಿದೆ. ಬಂಡಾಯದ ಹಿನ್ನೆಲೆಯಲ್ಲಿ ಇಂದು ಶಿವಸೇನೆ ಕಚೇರಿಯಲ್ಲಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಈ ಸಭೆಗೆ ಹಾಜರಾಗದಿದ್ದವರಿಗೆ ನೋಟಿಸ್ ನೀಡಲು ನಿರ್ಧರಿಸಲಾಗಿದ್ದು, ಸೋಮವಾರ ಸಂಜೆಯೊಳಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ.
ಈ ಸಭೆಯಲ್ಲಿ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಶಿವಸೇನೆ ನಾಯಕ ಸಂಜಯ್ ರಾವುತ್ ಮಾಹಿತಿ ನೀಡಿದ್ದು, ಶಿವಸೇನೆ ಇದು ಬಾಳಾಸಾಹೇಬ್ ಠಾಕ್ರೆ ಅವರಿಗೆ ಮಾತ್ರ ಸೇರಿದ್ದು. ಪಕ್ಷ ಅವರೊಂದಿಗೆ ಉಳಿಯುತ್ತದೆ ಮತ್ತು ಬಾಳಾ ಸಾಹೇಬ್ ಅವರ ಆಲೋಚನೆಯೊಂದಿಗೆ ಮುಂದುವರಿಯುತ್ತದೆ, ಶಿವಸೇನೆ ಮರಾಠಿ ಕಲ್ಪನೆಯೊಂದಿಗೆ ಮುಂದುವರಿಯುತ್ತದೆ ಎಂದು ಹೇಳಿದರು.
ತನಗೆ ದ್ರೋಹ ಬಗೆದವರ ವಿರುದ್ಧ ಕ್ರಮ ಕೈಗೊಳ್ಳುವ ಹಕ್ಕನ್ನು ಉದ್ಧವ್ ಠಾಕ್ರೆ ಅವರಿಗೆ ನೀಡಲಾಗಿದೆ. ಯಾವುದೇ ಅಪ್ರಾಮಾಣಿಕ ಮತ್ತು ದೇಶದ್ರೋಹಿ ಬಾಳಾಸಾಹೇಬರ ಹೆಸರನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ನೀವು ಮತ ಕೇಳಲು ಬಯಸಿದರೆ, ಶಿವಸೇನೆಯ ತಂದೆಯ ಹೆಸರಿನಲ್ಲಿ ಅಲ್ಲ, ನಿಮ್ಮ ತಂದೆಯ ಹೆಸರಿನಲ್ಲಿ ಕೇಳಿ ಎಂದು ಉದ್ಧವ್ ಜಿ ಹೇಳಿದರು. ಸಂಜೆಯ ವೇಳೆಗೆ ಯಾರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಅಥವಾ ಸಚಿವ ಸ್ಥಾನವನ್ನು ತೆಗೆದುಹಾಕಲಾಗುತ್ತದೆ ಎಂಬ ಸುಳಿವು ಸಿಗಲಿದೆ ಎಂದು ಸಂಜಯ್ ರಾವುತ್ ಹೇಳಿದರು.