National

ಗುಜರಾತ್‌ ಗಲಭೆ; 19 ವರ್ಷ ವಿಷಕಂಠನಂತೆ ಸಹಿಸಿಕೊಂಡಿದ್ದ ಮೋದಿ; ಅಮಿತ್‌ ಶಾ

ನವದೆಹಲಿ; ಗುಜರಾತ್ ಗಲಭೆ  ಪ್ರಕರಣದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 19 ವರ್ಷಗಳಿಂದ ಒಂದು ಮಾತನ್ನೂ ಆಡದೆ ನೋವನ್ನು ವಿಷಕಂಟನಂತೆ ಸಹಿಸಿಕೊಂಡಿದ್ದಾರೆ. ವಿಷ ನುಂಗಿ ತನ್ನ ಗಂಟಲಿನಲ್ಲಿ ಹಿಡಿದಿಟ್ಟುಕೊಂಡ ಶಿವನಂತೆ ಮೋದಿ ಇದ್ದರು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಗುಜರಾತ್‍ನ ಗೋಧ್ರಾ ನರಮೇಧ ನಂತರದ ಹಿಂಸಾಚಾರ ಪ್ರಕರಣದಲ್ಲಿ ನರೇಂದ್ರ ಮೋದಿ ಅವರಿಗೆ ಎಸ್‍ಐಟಿ (ವಿಶೇಷ ತನಿಖಾ ತಂಡ) ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿನ್ನೆ ವಜಾಗೊಳಿಸಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮಿತ್ ಶಾ, ಗುಜರಾತ್ ಗಲಭೆ ಯಾಕಾಯಿತು, ಹೇಗಾಯಿತು, ನಂತರದ ಪರಿಣಾಮಗಳು ಹೇಗೆ ಬೀರಿದ್ದವು ಎಂಬುದನ್ನು ವಿವರಿಸಿದ್ದಾರೆ.

 

Share Post