ನನ್ನ ರಾಜೀನಾಮೆ ಪತ್ರ ಬರೆದಿಟ್ಟಿದ್ದೇವೆ, ಎಲ್ಲಾ ಬನ್ನಿ ರಾಜೀನಾಮೆ ಕೊಡ್ತೇನೆ; ಉದ್ಧವ್ ಠಾಕ್ರೆ
ಮುಂಬೈ; ನಾನು ರಾಜೀನಾಮೆ ಪತ್ರವನ್ನು ಬರೆದಿಟ್ಟಿದ್ದೇನೆ. ನೀವೆಲ್ಲರೂ ಬನ್ನಿ. ಎಲ್ಲರೂ ಸೇರಿ ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ನೀಡೋಣ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಬಂಡಾಯವೆದ್ದ ಶಾಸಕರಿಗೆ ಮನವಿ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆಯಲ್ಲಿ ಫೇಸ್‌ಬುಕ್ ಲೈವ್ ಬಂದಿರುವ ಅವರು, ನಿಮ್ಮ ಕಾರ್ಯವೈಖರಿ ಸರಿಯಿಲ್ಲವೆಂದರೆ ರಾಜೀನಾಮೆಗೆ ಸಿದ್ಧನಿದ್ದೇನೆ. ನೀವು ಇಲ್ಲಿಗೆ ಬನ್ನಿ ಎಂದು ಕರೆ ಕೊಟ್ಟಿದ್ದಾರೆ.
ನೀವು ಎಲ್ಲೋ ಕುಳಿತು ಉದ್ಧವ್ ಠಾಕ್ರೆ ಸರಿ ಇಲ್ಲ ಎಂದರೆ ಆಗುವುದಿಲ್ಲ. ನೀವೆಲ್ಲಾ ನನ್ನ ಮುಂದೆ ಬನ್ನಿ. ನನ್ನ ಎದುರು ಕುಳಿತು ಅದೇ ಮಾತನ್ನು ಹೇಳಿ. ಆಗ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ. ಶಿವಸೇನೆಯ ಕೆಲ ಶಾಸಕರು ಎಲ್ಲಿಹೋಗಿದ್ದಾರೆ ಎಂಬುದು ನನಗೆ ಬೇಕಿಲ್ಲ. ಆದ್ರೆ ನಾನು ಸರಿಯಾಗಿ ಆಡಳಿತ ನಿರ್ವಹಿಸುತ್ತಿಲ್ಲ. ನೀವು ರಾಜೀನಾಮೆ ನೀಡಿ ಎಂದು ಅವರು ಹೇಳಿದ್ದರೆ ನಾನೇ ಅಧಿಕಾರ ಬಿಟ್ಟು ಹೋಗುತ್ತಿದ್ದೆ. ಆದ್ರೆ ಅದು ಬಿಟ್ಟು ದೂರ ಹೋಗಿ ಎಲ್ಲೋ ಕುಳಿತಿದ್ದಾರೆ. ಈಗಲೂ ಅವರಿಗೆ ನಾನು ಬೇಡ ಎಂದರೆ ಬಂದು ಹೇಳಲಿ, ಎಲ್ಲರೂ ಸೇರಿ ಒಟ್ಟಾಗಿ ಹೋಗಿ ರಾಜ್ಯಪಾಲರನ್ನು ಭೇಟಿಯಾಗೋಣ. ನಾನು ಎಲ್ಲರ ಮುಂದೆಯೇ ರಾಜ್ಯಪಾಲರಿಗೆ ರಾಜೀನಾಮೆಯನ್ನು ಸಲ್ಲಿಸುತ್ತೇನೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಕೆಲವರು ನನ್ನ ಬಗ್ಗೆ ಅಪ ಪ್ರಚಾರ ಮಾಡುತ್ತಿದ್ದಾರೆ. ನಾನು ರಾಜ್ಯದ ಜನರನ್ನು ಭೇಟಿಯಾಗುತ್ತಿಲ್ಲ. ಅವರ ಸಮಸ್ಯೆಗಳನ್ನು ಆಲಿಸುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಆದ್ರೆ ನನಗೆ ಶಸ್ತ್ರಚಿಕಿತ್ಸೆ ಆಗಿರುವುದರಿಂದ ಎರಡು ಮೂರು ತಿಂಗಳಿಂದ ಭೇಟಿಯಾಗಿಲ್ಲ ಅಷ್ಟೇ. ಶಿವಸೈನಿಕರು ನಮ್ಮನ್ನ ಆಯ್ಕೆ ಮಾಡಿ ಕಳುಹಿಸಿದ್ದಾರೆ. ನಾವು ಈ ಮೊದಲೂ ಹಿಂದದೂತ್ವ ವಾದಿಗಳಾಗಿದ್ದೆವು, ಈಗಲೂ ಹಿಂದುತ್ವವಾದಿಗಳೇ ಆಗಿದ್ದೇವೆ. ಇದರಲ್ಲಿ ಎರಡು ಮಾತಿಲ್ಲ ಎಂದು ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿ