ಪಶ್ಯ ವೈದ್ಯ ಸೇರಿ ಅವರ ಕುಟುಂಬದ ಎಲ್ಲಾ ಒಂಬತ್ತು ಮಂದಿ ನಿಗೂಢ ಸಾವು..!
ಸಾಂಗಲಿ; ಮಹಾರಾಷ್ಟ್ರದ ಸಾಂಗಲಿ ಜಿಲ್ಲೆ ಮೀರಜ್ ತಾಲೂಕಿನ ಮಹಿಸಾಲ್ ಗ್ರಾಮದ ಒಂದೇ ಕುಟುಂಬದ ಒಂಬತ್ತು ಮಂದಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಮೃತದೇಹಗಳು ಎರಡು ಬೇರೆ ಬೇರೆ ಸ್ಥಳಗಳಲ್ಲಿ ಪತ್ತೆಯಾಗಿವೆ. ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆಯಾದರೂ, ಈ ಸಾವುಗಳ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಪಶುವೈದ್ಯ ಮಾಣಿಕ್ ಯಲ್ಲಪ್ಪ ವನಮೋರೆ ಮತ್ತು ಅವರ ಸಹೋದರ ಪೋಪಟ್ ಯಲ್ಲಪ್ಪ ವನಮೋರೆ, ತಾಯಿ, ಹೆಂಡತಿ ಮತ್ತು ಮಕ್ಕಳ ಶವಗಳು ಗ್ರಾಮದ ಎರಡು ಸ್ಥಳಗಳಲ್ಲಿ ದೊರೆತಿವೆ. ಕುಟುಂಬದವರೆಲ್ಲರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ. ಆದರೆ, ತಕ್ಷಣಕ್ಕೆ ಇಷ್ಟೊಂದು ಜನರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೀರಜ್ನ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.