ಡ್ರಗ್ಸ್ ಪಾರ್ಟಿ ಕೇಸ್; ಸಿದ್ಧಾಂತ್ ಸೇರಿ ಐದು ಮಂದಿ ಡ್ರಗ್ಸ್ ಸೇವಿಸಿದ್ದಾರೆ; ಡಿಸಿಪಿ
ಬೆಂಗಳೂರು; ಖಾಸಗಿ ಹೋಟೆಲ್ನಲ್ಲಿ ನಡೆದ ಪಾರ್ಟಿಯಲ್ಲಿ ಐದು ಮಂದಿ ಡ್ರಗ್ಸ್ ಸೇವನೆ ಮಾಡಿರುವುದು ಸಾಬೀತಾಗಿದೆ. ಅದ್ರಲ್ಲಿ ಬಾಲಿವುಡ್ ನಟ ಸಿದ್ಧಾಂತ್ ಕಪೂರ್ ಕೂಡಾ ಸೇರಿದ್ದಾರೆ. ಐದೂ ಮಂದಿಯನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಪೂರ್ವ ವಿಬಾದ ಡಿಸಿಪಿ ಭಿಮಾಶಂಕರ ಗುಳೇದ ಅವರು ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಅವರು, ಡ್ರಗ್ಸ್ ಪಾರ್ಟಿಯಲ್ಲಿ ನೂರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಅದರಲ್ಲಿ ಅನುಮಾನದ ಮೇಲೆ ಕೆಲವರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಈ ವೇಳೆ ಐವರು ಡ್ರಗ್ಸ್ ಸೇವಿಸಿರುವುದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಸ್ಥಳದಲ್ಲಿ ಏಳು ಎಂಡಿಎಂಎ ಮಾತ್ರೆಗಳು ಹಾಗೂ ಗಾಂಜಾ ಪತ್ತೆಯಾಗಿದೆ. ಪಾರ್ಟಿಯಲ್ಲಿ ಪಾಲ್ಗೊಂಡಿದ್ದವರಲ್ಲಿ ಉತ್ತರ ಭಾರತದವರೇ ಹೆಚ್ಚಿದ್ದಾರೆ. ಬಂಧನವಾಗಿರುವರು ಎಲ್ಲರೂ ಕೂಡಾ ಬೆಂಗಳೂರಿನವರಲ್ಲ. ಆದ್ರೆ ಮೂವರು ಬೆಂಗಳೂರಿನಲ್ಲಿ ನೆಲೆಸಿದ್ದರು ಎಂದು ಡಿಸಿಪಿ ಭಿಮಾಶಂಕರ ಗುಳೇದ ಅವರು ಹೇಳಿದ್ದಾರೆ. ಇನ್ನು ಖಾಸಗಿ ಮ್ಯಾನೇಜ್ಮೆಂಟ್ ಒಂದು ಇಲ್ಲಿ ಪಾರ್ಟಿ ಏರ್ಪಡಿಸಿತ್ತು ಎಂದು ತಿಳಿದುಬಂದಿದೆ. ಈ ಪಾರ್ಟಿಗೆ ಸಾರ್ವಜನಿಕರಿಗೂ ಪ್ರವೇಶವಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿ ಹೆಚ್ಚು ಜನರು ಸೇರಿದ್ದರು ಎಂದು ಹೇಳಲಾಗುತ್ತಿದೆ. ಸಿದ್ಧಾಂತ್ ಕಪೂರ್ ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು ಎಂದು ಹೇಳಲಾಗಿದೆ. ಘಟನೆ ಸಂಬಂಧ ಹೋಟೆಲ್ ಮಾಲೀಕರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.