ಬಾರಾಮುಲ್ಲಾ ಬಳಿ ಐಇಡಿ ಸ್ಫೋಟಕ ಪತ್ತೆ; ತಪ್ಪಿದ ಭಾರಿ ದುರಂತ
ಶ್ರೀನಗರ; ಜಮ್ಮು ಮತ್ತು ಕಾಶ್ಮೀರದ ಶ್ರೀನಗರ–ಬಾರಾಮುಲ್ಲಾ ಹೆದ್ದಾರಿಯಲ್ಲಿ ಐಇಡಿ ಪತ್ತೆಯಾಗಿದೆ. ಭದ್ರತಾ ಪಡೆಗಳು ಸೋಟಕವನ್ನು ವಶಪಡಿಸಿಕೊಂಡು, ಭಾರಿ ದುರಂತವೊಂದನ್ನು ತಪ್ಪಿಸಿದ್ದಾರೆ.
ಸಂಗ್ರಾಮ ಹೆದ್ದಾರಿಯಲ್ಲಿ ಅನುಮಾನಾಸ್ಪದ ವಸ್ತು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ವಾಹನ ಸಂಚಾರವನ್ನು ಕೆಲಕಾಲ ನಿರ್ಬಂಧಿಸಲಾಗಿತ್ತು. ಪರಿಶೀಲನೆ ನಡೆಸಿದಾಗ ಅದು ಸ್ಫೋಟಕ ಎಂದು ಗೊತ್ತಾಗಿದೆ. ಸೇನೆಯ ‘‘5 ರಾಷ್ಟ್ರೀಯ ರೈಫಲ್ಸ್’ ಪಡೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಾರಾಮುಲ್ಲಾ ಜಿಲ್ಲೆಯ ಸಂಗ್ರಾಮದ ಪುಟ್ಖಾ ಎಂಬಲ್ಲಿ ಸ್ಫೋಟಕವನ್ನು ವಶಪಡಿಸಿಕೊಂಡಿದ್ದಾರೆ. ಅದನ್ನು ನಿಷ್ಕ್ರಿಯಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.