CrimeNational

ಪಬ್‌ ಜಿ ಆಡಬೇಡ ಎಂದಿದ್ದಕ್ಕೆ ತಾಯಿಯನ್ನೇ ಕೊಂದ ಮಗ

ಲಖನೌ; ಉತ್ತರ ಪ್ರದೇಶದ ರಾಜಧಾನಿ ಲಖನೌನಲ್ಲಿ ಪಬ್‌ ಜಿ ಗೀಳು ತಾಯಿಯೊಬ್ಬಳನ್ನು ಬಲಿ ತೆಗೆದುಕೊಂಡಿದೆ. ಪಬ್‌ ಜಿ ಗೇಮ್‌ ಗೀಳು ಹತ್ತಿಸಿಕೊಂಡಿದ್ದ 10ನೇ ತರಗತಿ ಓದುತ್ತಿದ್ದ 16 ವರ್ಷದ ಬಾಲಕ ತನ್ನ ತಾಯಿಯನ್ನು ಗುಂಡಿಕ್ಕಿ ಕೊಂದಿದ್ದಾನೆ. ನಂತರ 10 ವರ್ಷದ ತಂಗಿಯೊಂದಿಗೆ ಮೂರು ದಿನಗಳ ಕಾಲ ತಾಯಿಯ ಶವದೊಂದಿಗೆ ಮನೆಯಲ್ಲೇ ವಾಸಿಸಿದ್ದಾನೆ. ಮಂಗಳವಾರ ಸಂಜೆ ಮೃತದೇಹದಿಂದ ದುರ್ವಾಸನೆ ಬರಲಾರಂಭಿಸಿದಾಗ ಬಾಲಕ ತಾನು ಮಾಡಿದ ಕೊಲೆಗೆ ಸುಳ್ಳು ಕಥೆಯನ್ನು ಹೆಣೆದಿದ್ದಾನೆ.

    ಲಖನೌನ ಯಮುನಾಪುರಂ ಕಾಲೊನಿಯಲ್ಲಿ ಸಾಧನಾ ತನ್ನ 16 ವರ್ಷದ ಮಗ ಮತ್ತು 10 ವರ್ಷದ ಮಗಳೊಂದಿಗೆ ವಾಸವಿದ್ದರು. ಸಾಧನಾ ಅವರ ಪತಿ ನವೀನ್ ಸಿಂಗ್ ಅವರು ಕೋಲ್ಕತ್ತಾದ ಅಸನ್ಸೋಲ್‌ನಲ್ಲಿ ಸೇನೆಯಲ್ಲಿ JCO ಆಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಸಾಧನಾಗೆ ಮಗನ ಈ ಚಟ ಇಷ್ಟವಿರಲಿಲ್ಲ. ಇದರಿಂದಾಗಿ ಬಾಲಕ ತನ್ನ ತಾಯಿಯೊಂದಿಗೆ ಆಗಾಗ ಜಗಳವಾಡುತ್ತಿದ್ದ. ಶನಿವಾರ ಸಾಧನಾ ಅವರು ಮನೆಯಲ್ಲಿ ಮಲಗಿದ್ದಾಗ ಪರವಾನಗಿ ಪಡೆದ ಪಿಸ್ತೂಲ್‌ನಿಂದ ತಾಯಿಯ ತಲೆಗೆ ಗುಂಡು ಹಾರಿಸಿ ಕೊಂದಿದ್ದಾನೆ. ಮೂರು ದಿನಗಳ ಕಾಲ ತಾಯಿ ಶವವನ್ನು ಬೆಡ್​ರೂಂನಲ್ಲೇ ಇಟ್ಟಿದ್ದ. ಬಳಿಕ ವಾಸನೆ ಹೋಗಲಾಡಿಸಲು ರೂಮ್ ಫ್ರೆಶ್ನರ್ ಅನ್ನು ಪದೇ ಪದೆ ಸ್ಪ್ರೇ ಮಾಡುತ್ತಿದ್ದನೆಂದು ತಿಳಿದುಬಂದಿದೆ.

Share Post