BengaluruPolitics

NSUI ಮುಖಂಡರ ಬಂಧನ ವಿಚಾರ; ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ

ಬೆಂಗಳೂರು; ತಿಪಟೂರಿನಲ್ಲಿ ಸಚಿವ ನಾಗೇಶ್‌ ಮನೆಗೆ ಎನ್‌ಎಸ್‌ಯುಐ ಮುತ್ತಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. 

 

ಪಠ್ಯಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಜೂನ್‌ ೧ ರಂದು ಎನ್‌ಎಸ್‌ಯುಐ ಅಧ್ಯಕ್ಷ ಕೀರ್ತಿ ಗಣೇಶ್‌ ನೇತೃತ್ವದಲ್ಲಿ ತಿಪಟೂರಿನ ಸಚಿವರ ನಿವಾಸದ ಬಳಿ ಪ್ರತಿಭಟನೆ ನಡೆಸಲಾಗಿತ್ತು. ಮನೆಯ ಗೇಟ್‌ ತೆಗೆದಿದ್ದರಿಂದ ಪ್ರತಿಭಟನಾಕಾರರು ಒಳಗೆ ಹೋಗಿದ್ದರು. ಆರ್‌ಎಸ್‌ಎಸ್‌ನವರು ಈ ಹಿಂದೆ ಚೆಡ್ಡಿ ಹಾಕುತ್ತಿದ್ದರು. ಹೀಗಾಗಿ ಸಾಂಕೇತಿಕವಾಗಿ ಪ್ರತಿಭಟನಾಕಾರರು, ಆರ್‌ಎಸ್‌ಎಸ್‌ ಚೆಡ್ಡಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದೇ ಚಡ್ಡಿ ಸುಟ್ಟಿದ್ದು ಬಿಜೆಪಿಯವರಿಗೆ ತಪ್ಪಾಗಿಬಿಟ್ಟಿದೆ ಎಂದು ಸಿದ್ದರಾಮ್ಯಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಪ್ರತಿಭಟನೆ ನಡೆಸುವಾಗ ಜನ ಸೇರುವುದು ಸಾಮಾನ್ಯ. ಆದ್ರೆ ಇದೇ ಕಾರಣಕ್ಕೆ ಎನ್‌ಎಸ್‌ಯುಐ ಕಾರ್ಯಕರ್ತರ ಮೇಲೆ ಕೇಸ್‌ ಹಾಕಿ ಬಂಧಿಸಲಾಗಿದೆ. ಹಾಗಾದ್ರೆ, ಪ್ರತಿಭಟನಾಕಾರರ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆ ಮಾಡಿದವರನ್ನು ಯಾಕೆ ಬಂಧಿಸಿಲ್ಲ ಎಂದು ಸಿದ್ದರಾಮಯ್ಯ ಇದೇ ವೇಳೆ ಪ್ರಶ್ನೆ ಮಾಡಿದ್ದಾರೆ. ಪ್ರತಿಭಟನಾಕಾರರ ವಿರುದ್ಧ ಹಲ್ಲೆ ಮಾಡಿದವರ ವಿರುದ್ಧವೂ ಕ್ರಮ ಆಗಬೇಕು. ಅದಕ್ಕಾಗಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

 

Share Post