NationalPolitics

ಸಹಿ ಮಾಡುವಾಗ ಮಾತ್ರ ನಾನು ಪ್ರಧಾನಿ; ನರೇಂದ್ರ ಮೋದಿ

ಶಿಮ್ಲಾ; ಬಡವರು ದಲಿತರು, ಬುಡಕಟ್ಟು ಜನಾಂಗದ ಕಲ್ಯಾಣ ನಮ್ಮ ಸರ್ಕಾರದ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಶಿಮ್ಲಾದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗರೀಬ್‌ ಕಲ್ಯಾಣ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಾನು ಯಾವಾಗಲೂ ಬಡವರ ಪರವಾಗಿಯೇ ಇರುತ್ತೇನೆ. ಬಡವರು, ದಲಿತರು, ಬುಡಕಟ್ಟು ಜನರ ಉದ್ಧಾರಕ್ಕಾಗಿ ಯೋಚಿಸುತ್ತಿರುತ್ತೇನೆ ಎಂದು ಪ್ರಧಾನಿ ಮೋದಿ, ನಾನು ಸಹಿ ಮಾಡುವಾಗ ಮಾತ್ರ ಪ್ರಧಾನಿ ಅನಿಸುತ್ತೆ. ಅನಂತರ ೧೩೦ ಕೋಟಿ ಜನರಲ್ಲಿ ನಾನೂ ಒಬ್ಬ ಅನಿಸುತ್ತೆ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಆಗಮಿಸುವಾಗ ಪ್ರಧಾನಿ ಮೋದಿಯವರು, ರಸ್ತೆಯಲ್ಲಿ ಅಕ್ಕಪಕ್ಕ ನಿಂತುರುವವರಿಗೆ ಕೈಬೀಸುತ್ತಾ ಬಂದರು. ಈ ವೇಳೆ ಅವರ ಮೇಲೆ ಹೂಮಳೆ ಸುರಿಸಲಾಯಿತು.

Share Post