BengaluruPolitics

ನಾನು ಗೆದ್ದೇ ತೀರುತ್ತೇನೆ; ಬಿಜೆಪಿ ಅಭ್ಯರ್ಥಿ ಲೆಹರ್‌ ಸಿಂಗ್‌

ಬೆಂಗಳೂರು; ರಾಜ್ಯ ವಿಧಾನಸಭೆಯಿಂದ ಆಯ್ಕೆಯಾಗುವ  ರಾಜ್ಯಸಭಾ ಸ್ಥಾನಗಳಲ್ಲಿ ಎರಡು ಸ್ಥಾನಗಳಲ್ಲಿ ಗೆಲ್ಲಲು ಬಿಜೆಪಿಗೆ ಅವಕಾಶವಿದೆ. ಮೂರನೇ ಸ್ಥಾನ ಗೆಲ್ಲಬೇಕಾದರೆ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಹೆಚ್ಚುವರಿ ಮತಗಳು ಬೇಕಾಗುತ್ತದೆ. ಹೀಗಿದ್ದರೂ, ಬಿಜೆಪಿ ಮೂರನೇ ಅಭ್ಯರ್ಥಿಯಾಗಿ ಲೆಹರ್‌ ಸಿಂಗ್‌ ಅವರನ್ನು ಕಣಕ್ಕಿಳಿಸಿದೆ. 

 

ಇಂದು ನಾಮಪತ್ರ ಸಲ್ಲಿಸೋದಕ್ಕೂ ಮೊದಲು ಮಾತನಾಡಿರುವ ಲೆಹರ್‌ ಸಿಂಗ್‌, ನನಗೆ ಎಲ್ಲಾ ಪಕ್ಷದಲ್ಲೂ ಸ್ನೇಹಿತರಿದ್ದಾರೆ. ಜೆಡಿಎಸ್‌, ಕಾಂಗ್ರೆಸ್‌ ನವರೂ ಮತ ಹಾಕುತ್ತಾರೆ. ಚುನಾವಣೆಯಲ್ಲಿ ನಾನು ಗೆದ್ದೇ ತೀರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share Post