National

34 ವರ್ಷದ ಹಳೆ ಪ್ರಕರಣ; ನವಜೋತ್‌ ಸಿಧುಗೆ ಒಂದು ವರ್ಷ ಜೈಲು

ನವದೆಹಲಿ; 34 ವರ್ಷಗಳ ಹಳೇ ಕೇಸ್‌ನಲ್ಲಿ ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ನವಜೋತ್‌ ಸಿಂಗ್‌ ಸಿಧು ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಸಿಧುಗೆ ಬಂಧನದ ಭೀತಿ ಎದುರಾಗಿದೆ.

1988ರ ಡಿಸೆಂಬರ್‌ 27ರಂದು ಪಟಿಯಾಲದಲ್ಲಿ ಮುದುಕರೊಬ್ಬರ ಮೇಲೆ ನವಜೋತ್‌ ಸಿಂಗ್‌ ಸಿಧು ಹಲ್ಲೆ ನಡೆಸಿದ್ದರು. ತೀವ್ರ ಹಲ್ಲೆಗೊಳಗಾಗಿದ್ದ ವೃದ್ಧ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಈ ಪ್ರಕರಣದ ವಿಚಾರಣೆ ಹಲವು ನ್ಯಾಯಾಲಯಗಳಲ್ಲಿ ದೀರ್ಘಕಾಲ ನಡೆದಿದೆ. ಇದೀಗ ಸುಪ್ರೀಂ ಕೋರ್ಟ್‌, ನವಜೋತ್‌ ಸಿಂಗ್‌ ಸಿಧು ತಪ್ಪಿತಸ್ಥರೆಂದು ತೀರ್ಪು ನೀಡಿದೆ. ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ಕೂಡಾ ವಿಧಿಸಿದೆ.

ಕೋರ್ಟ್‌ ತೀರ್ಪು ಹಿನ್ನೆಲೆಯಲ್ಲಿ ಪಂಜಾಬ್‌ನ ಪಟಿಯಾಲ ಪೊಲೀಸರು ಸಿಧು ಬಂಧನಕ್ಕೆ ಬಲೆ ಬೀಸಿದ್ದಾರೆ. ಯಾವ ಕ್ಷಣದಲ್ಲಾದರೂ ಸಿಧು ಬಂಧನವಾಗುವ ಸಾಧ್ಯತೆ ಇದೆ.

Share Post