National

ನೋಂದಾಯಿತ ಕಾರ್ಮಿಕರಿಗೆ ಉಚಿತ ಬಸ್‌ ಪಾಸ್‌; ಮಹತ್ವದ ಯೋಜನೆ ಜಾರಿ

ನವದೆಹಲಿ; ದೆಹಲಿಯ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಎಎಪಿ ಸರ್ಕಾರ, ಜನರಿಗೆ ಹಲವು ಮೂಲ ಸೌಕರ್ಯಗಳನ್ನು ಉಚಿತವಾಗಿ ಒದಗಿಸುತ್ತಿದೆ. ಇದರ ಭಾಗವಾಗಿ ಮಹಿಳೆಯರಿಗೆ ಬಸ್‌ಗಳಲ್ಲಿ ಓಡಾಡಲು ಉಚಿತ ಬಸ್‌ ಪಾಸ್‌ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಈ ಯೋಜನೆಯನ್ನು ನೋಂದಾಯಿತ ಕಾರ್ಮಿಕರಿಗೂ ವಿಸ್ತರಿಸಲಾಗಿದೆ. ನಿನ್ನೆಯಿಂದಲೇ ಈ ಯೋಜನೆ ಜಾರಿಗೆ ಬಂದಿದ್ದು, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಇಂದು ಯೋಜನೆಗೆ ಚಾಲನೆ ನೀಡಿದ್ದಾರೆ. 

 

ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುವ ಬೇಲ್ದಾರ್, ಮೇಸ್ತ್ರಿಗಳು, ಬಡಗಿಗಳು, ಎಲೆಕ್ಟ್ರಿಷಿಯನ್, ಗಾರ್ಡ್ ಮತ್ತು ಇತರ ಕಾರ್ಮಿಕರು ಇದರ ಪ್ರಯೋಜನವನ್ನು ಪಡೆಯಬಹುದು. ಕೂಲಿಕಾರರಿಗೆ ಗರಿಷ್ಠ ನೆರವು ನೀಡಬೇಕೆಂಬುದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪ್ರಯತ್ನವಾಗಿದೆ ಎಂದು ಮನೀಸ್‌ ಸಿಸೋಡಿಯಾ ತಿಳಿಸಿದ್ದಾರೆ.

Share Post