National

ಟೆಸ್ಟ್‌, ಟ್ರ್ಯಾಕ್‌, ಟ್ರೀಟ್‌ ತಂತ್ರ ಪರಿಣಾಮಕಾರಿಯಾಗಿ ಬಳಸಿ; ಪ್ರಧಾನಿ ನರೇಂದ್ರ ಮೋದಿ

ನವದೆಹಲಿ; ಟೆಸ್ಟ್‌, ಟ್ರ್ಯಾಕ್‌, ಟ್ರೀಟ್‌ ತಂತ್ರ ಪರಿಣಾಮಕಾರಿಯಾಗಿ ಬಳಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೊರೊನಾ ನಾಲ್ಕನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ನಾವು ಸಿದ್ಧರಾಗಿದ್ದೇವೆ ಎಂದು ಹೇಳಿದರು.

ಲಸಿಕಾಕರಣಕ್ಕೆ ವೇಗ ನೀಡುವುದು ನಮ್ಮ ಆದ್ಯತೆ. ಮಕ್ಕಳಿಗೂ ಲಸಿಕೆ ನೀಡುವ ವೇಗ ಹೆಚ್ಚು ಮಾಡುತ್ತಿದ್ದೇವೆ. ಶಾಲೆಯಲ್ಲಿ ವಿಶೇಷ ಲಸಿಕಾ ಅಭಿಯಾನ ನಡೆಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು. ಜನರಿಗೆ ಈಗ ಬೂಸ್ಟರ್‌ ಡೋಸ್‌ ನೀಡಲಾಗುತ್ತಿದೆ. ಅದನ್ನು ಶೀಘ್ರವಾಗಿ ಪಡೆಯಬೇಕು. ಮತ್ತು ನಾಲ್ಕನೇ ಅಲೆಯ ಬಗ್ಗೆ ಜಾಗ್ರತೆ ಇರಬೇಕು ಎಂದು ಅವರು ಹೇಳಿದರು. ಜನರು ಕೊವಿಡ್‌ ನಿಯಮಗಳನ್ನು ತಪ್ಪದೆ ಪಾಲನೆ ಮಾಡಬೇಕು ಎಂದೂ ಇದೇ ವೇಳೆ ಪ್ರಧಾನಿ ಮನವಿ ಮಾಡಿದರು.

ಕೊರೊನಾ ನಮ್ಮಿಂದ ಇನ್ನೂ ದೂರವಾಗಿಲ್ಲ. ಈ ಹಿಂದಿನ ಮೂರು ಅಲೆಗಳಿಂದ ಸಾಕಷ್ಟು ವಿಚಾರಗಳನ್ನು ನಾವು ಕಲಿತಿದ್ದೇವೆ. ಭಾರತದ ಶೇ.೯೬ರಷ್ಟು ಮಂದಿಗೆ ಒಂದು ಡೋಸ್‌ ಲಸಿಕೆ ನೀಡಲಾಗಿದೆ. ಕೊರೊನಾದಿಂದ ಬಚಾವಾಗಲೂ ಲಸಿಕೆಯೇ ಶ್ರೀರಕ್ಷೆ ಎಂದು ಪ್ರಧಾನಿ ಹೇಳಿದರು.

Share Post