ದೇವರಾಜ ಮಾರುಕಟ್ಟೆ ಕಟ್ಟಡ ಉಳಿವಿಗೆ ಹೋರಾಟ; ಯಧುವೀರ್ ಚಾಲನೆ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಪಾರಂಪರಿಕ ಕಟ್ಟಡಗಳಲ್ಲಿ ಒಂದಾದ ದೇವರಾಜ ಮಾರುಕಟ್ಟೆ ಉಳಿಸಲು ಆಗ್ರಹಿಸಿ ಇಂದು ವ್ಯಾಪಾರಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು. ಇದಕ್ಕೆ ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರಿನ ಚಿಕ್ಕಗಡಿಯಾರದ ಆವರಣದಲ್ಲಿ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಅವರು, ದೇವರಾಜ ಮಾರುಕಟ್ಟೆ ಕಟ್ಟಿ 100 ವರ್ಷದ ಮೇಲಾಗಿದೆ. ಹೀಗಾಗಿ ಕಟ್ಟಡ ಹಳೆಯದಾಗಿದ್ದು, ಇದನ್ನು ಕೆಡವಬೇಕು ಎನ್ನುತ್ತಿದ್ದಾರೆ. ಆದ್ರೆ ಮೈಸೂರು ಅರಮನೆಗೆ ಕೂಡಾ 100 ವರ್ಷದ ಮೇಲಾಗಿದೆ, ಹಾಗಂತ ಅರಮೆನ ಕೆಡವಿಉ, ಬೇರೆ ಕಟ್ಟೋದಕ್ಕೆ ಆಗುತ್ತದೆಯೇ ಎಂದು ಪ್ರಶ್ನೆ ಮಾಡಿದರು.
ಮೈಸೂರಿನ ಸಾಂಸ್ಕೃತಿಕ ಪಾರಂಪರಿಕ ಕಟ್ಟಡಗಳ ಜೊತೆ ಈ ಮಾರುಕಟ್ಟೆಯೂ ಬೆರೆತಿದೆ. ನೂರು ವರ್ಷ ಆಗಿದೆ ಎಂದು ಕಟ್ಟಡಗಳನ್ನು ಒಡೆಯುತ್ತಾ ಹೋದರೆ ಪಾರಂಪರಿಕತೆ ಉಳಿಯುತ್ತದೆಯೇ ಹೇಗೆ ಉಳಿಯುತ್ತದೆ ಎಂದು ಪ್ರಶ್ನಿಸಿದ ಯದುವೀರ್ ಅವರು, ಕಟ್ಟಡ ಕೆಡವಿ, ಮತ್ತೆ ಅದೇ ಮಾದರಿಯಲ್ಲಿ ಕಟ್ಟಿದರೂ ಆ ಕಟ್ಟಡಕ್ಕೆ ಹಳೇ ಇತಿಹಾಸ ಬರುವುದಿಲ್ಲ. ಹೀಗಾಗಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಪಾರಂಪರಿಕ ಕಟ್ಟಡ ಉಳಿಸುವ ಹೊಸ ತಜ್ಞರ ಸಮಿತಿ ರಚನೆ ಮಾಡಬೇಕು. ಜನರ ಅಭಿಪ್ರಾಯಗಳಿಗೆ, ಭಾವನಗಳಿಗೆ ಸ್ಪಂದಿಸುವುದು ಸರ್ಕಾರದ ಜವಾಬ್ದಾರಿ ಎಂದರು.