ರಾಜೀನಾಮೆ ನೀಡಲ್ಲ, ಅಮೂಲಾಗ್ರ ತನಿಖೆಯಾಗಲಿ; ಸಚಿವ ಈಶ್ವರಪ್ಪ
ಶಿವಮೊಗ್ಗ: ಎಫ್‌ಐಆರ್ ದಾಖಲಾಗುತ್ತಿದ್ದ ಮೈಸೂರಿನಿಂದ ಶಿವಮೊಗ್ಗಕ್ಕೆ ಬಂದಿರುವ ಸಚಿವ ಈಶ್ವರಪ್ಪ ಅವರು, ನಾನು ಯಾವ ಕಾರಣಕ್ಕೆ ರಾಜೀನಾಮೆ ನೀಡಬೇಕು. ಅದಕ್ಕೆ ಕಾರಣವಾದರೂ ಕೊಡಿ. ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ ಎಂದು ಆರೋಪಿಸಿದ್ದಾರೆ.
ಸಂತೋಷ್ ಪಾಟೀಲ್ ಆತ್ಮಹತ್ಯೆ ದೊಡ್ಡ ಷಡ್ಯಂತ್ರ ಇದೆ. ಇದರ ಹಿಂದೆ ಯಾರಿದ್ದಾರೆ..? ಇದರ ಬಗ್ಗೆ ಅಮೂಲಾಗ್ರ ತನಿಖೆ ಆಗಬೇಕು. ಸಂತೋಷ್ ಅವರನ್ನು ಯಾರು ದೆಹಲಿಗೆ ಕಳುಹಿಸಿದರು..? ವಾಟ್ಸ್ ಆಪ್ ನಲ್ಲಿ ಟೈಪ್ ಮಾಡಿದವರು ಯಾರು..? ಎಂಬುದನ್ನು ಅಮೂಲಾಗ್ರ ತನಿಖೆಯಾಗಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.
ಪ್ರಕರಣದ ಬಗ್ಗೆ ಅಮೂಲಾಗ್ರ ತನಿಖೆಯಾಗಬೇಕು. ಡೆಡ್ ಬಾಡಿ ಬಳಿ ಹ್ಯಾಂಡ್ ರೈಟಿಂಗ್ ಪತ್ರ ಇಲ್ಲ. ಬರೀ ವಾಟ್ಸ್ ಆಪ್ ಸಂದೇಶ ಇದೆ. ಅದು ಯಾರು ಟೈಪ್ ಮಾಡಿದರು ಎಂಬುದು ಗೊತ್ತಿಲ್ಲ. ವಾಟ್ಸ್ ಆಪ್ ಸಂದೇಶ ಡೆತ್ ನೋಟ್ ಎಂದು ಹೇಗೆ ಪರಿಹರಿಸಲು ಆಗುತ್ತದೆ..? ಎಂದು ಈಶ್ವರಪ್ಪ ಪ್ರಶ್ನಿಸಿದರು. ಈಗಾಗಲೇ ನಳಿನ್ ಕುಮಾರ್ ಕಟೀಲ್ ಅವರಿಗೆ ದಾಖಲೆ ಕೊಟ್ಟಿದ್ದೇನೆ. ಸಾಧ್ಯವಾದರೆ ನಾಳೆ ಹಾಗೂ ನಾಡಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲಿದ್ದೇನೆ. ಅವರಿಗೂ ಪೂರ್ಣ ವಿವರ ನೀಡುತ್ತೇನೆ ಎಂದು ಹೇಳಿದರು.
ಕೇಂದ್ರ ನಾಯಕರು ಯಾರೂ ನನ್ನ ಬಳಿ ಮಾತನಾಡಿಲ್ಲ. ನಾನು ರಾಜೀನಾಮೆ ನೀಡುವುದಿಲ್ಲ. ಪ್ರಕರಣದ ಅಮೂಲಾಗ್ರ ತನಿಖೆಯಾಗಬೇಕೆಂದು ನಾನು ಆಗ್ರಹಿಸುತ್ತೇನೆ. ಮೃತ ಸಂತೋಷ್ ಯಾರೆಂದೇ ನನಗೆ ಗೊತ್ತಿಲ್ಲ. ಅವರ ಕುಟುಂಸ್ಥರ ಬಗ್ಗೆಯೂ ನನಗೆ ಗೊತ್ತಿಲ್ಲ. ವಿನಾಕಾರಣ ನನ್ನ ಮೇಲೆ ಆರೋಪ ಮಾಡುತ್ತಿಲ್ಲ. ನಾನು ನಿಂತಿದ್ದಾಗ ಯಾರು ಬೇಕಾದರೂ ಫೋಟೋ ತೆಗೆದುಕೊಂಡು ಹೋಗುತ್ತಾರೆ. ಅವರೆಲ್ಲರನ್ನೂ ನೆನಪಿನಲ್ಲಿಟ್ಟುಕೊಳ್ಳಲು ಆಗುತ್ತದಾ ಎಂದು ಕೂಡಾ ಈಶ್ವರಪ್ಪ ಪ್ರಶ್ನಿಸಿದ್ದಾರೆ.