ಸಚಿವ ಈಶ್ವರಪ್ಪ ವಿರುದ್ಧ ದೊಡ್ಡ ಪಿತೂರಿ ನಡೆದಿದೆ; ಸಚಿವ ಕೆ.ಗೋಪಾಲಯ್ಯ ಆರೋಪ
ಮೈಸೂರು: ಸಚಿವ ಈಶ್ವರಪ್ಪ ವಿರುದ್ಧ ದೊಡ್ಡ ಪಿತೂರಿ ನಡೆಸಲಾಗಿದೆ ಎಂದು ಸಚಿವ ಕೆ.ಗೋಪಾಲಯ್ಯ ಆರೋಪ ಮಾಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ರಾಜಕೀಯ ಪಿತೂರಿಯಿಂದ ಈಶ್ವರಪ್ಪ ಅವರಿಗೆ ಸಂಕಷ್ಟ ತಂದೊಡ್ಡಲಾಗಿದೆ ಎಂದು ಆರೋಪಿಸಿದರು.
ಸಂತೋಷ್ ಪಾಟೀಲ್ ಉಡುಪಿಗೆ ಹೋಗಿ ಏಕೆ ಆತ್ಮಹತ್ಯೆ ಮಾಡಿಕೊಂಡ ಎಂದು ಪ್ರಶ್ನಿಸಿರುವ ಗೋಪಾಲಯ್ಯ, ಸಂತೋಷ್ ಜೊತೆ ಯಾರಿದ್ದರು..?, ಸಂತೋಷ್ ದೆಹಲಿಗೆ ಹೋಗಿದ್ದು ಯಾಕೆ..?, ಅವರಿಗೆ ದೆಹಲಿಗೆ ಹೋಗಲು ಫ್ಲೈಟ್ ಟಿಕೆಟ್ ಕೊಡಿಸಿದ್ದು ಯಾರು..? ಎಂದು ಗೋಪಾಲಯ್ಯ ಪ್ರಶ್ನೆ ಮಾಡಿದರು. ಈಶ್ವರಪ್ಪ ಅವರು ವಿರುದ್ಧ ಯಾರು ಪಿತೂರಿ ನಡೆಸಿದ್ದಾರೆ. ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದರ ಹಿಂದಿನ ಪಿತೂರಿ ಏನು ಎಂಬುದು ತನಿಖೆಯಲ್ಲಿ ಗೊತ್ತಾಗಲಿದೆ ಎಂದೂ ಸಚಿವ ಗೋಪಾಲಯ್ಯ ಹೇಳಿದ್ದಾರೆ.