ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಪ್ರಧಾನಿ ಮೋದಿ ವರ್ಚುಯಲ್ ಸಭೆ
ವಾಷಿಂಗ್ಟನ್(ಅಮೆರಿಕಾ): ಇಂದು ರಾತ್ರಿ 8.30ರ ಸುಮಾರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆ ಪ್ರಧಾನಿ ನರೇಂದ್ರ ಮೋದಿ ವರ್ಚುಯಲ್ ಸಭೆ ನಡೆಸಲಿದ್ದಾರೆ. ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿದ್ದು, ರಷ್ಯಾ ಕ್ರಮವನ್ನು ಖಂಡಿಸಿ ಅನೇಕ ರಾಷ್ಟ್ರಗಳು ರಷ್ಯಾಗೆ ನಿರ್ಬಂದ ಹೇರಿವೆ. ಆದರೂ ಭಾರತ ರಷ್ಯಾ ತೈಲ ಆಮದು ಮಾಡಿಕೊಳ್ಳುತ್ತಿರುವುದರಿಂದ ಅಮೆರಿಕ ಕೋಪಗೊಂಡಿತ್ತು. ಹೀಗಿದ್ದರೂ ಅಮೆರಿಕ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಸಭೆ ನಡೆಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಉಭಯ ನಾಯಕರ ಮಾತುಕತೆ ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಎಂದು ಹೇಳಲಾಗುತ್ತಿದೆ. ಹವಾಮಾನ ಬಿಕ್ಕಟ್ಟು ಎದುರಿಸುವುದು, ದ್ವಿಪಕ್ಷೀಯ ಸಹಕಾರ, ದಕ್ಷಿಣ ಏಷ್ಯಾ, ಇಂಡೋ ಪೆಸಿಫಿಕ್ ಬೆಳವಣಿಗೆ, ಜಾಗತಿಕ ಆರ್ಥಿಕತೆಯನ್ನು ಬಲಪಡಿಸುವುದು ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಹೇಳಿದ್ದಾರೆ.