National

ಗಾಂಜಾ ವ್ಯಸನಿಯಾಗಿದ್ದ ಮಗನ ಕಣ್ಣಿಗೆ ಕಾರದಪುಡಿ ಹಾಕಿದ ತಾಯಿ..!

ಹೈದರಾಬಾದ್: ಮಗನಿಗೆ ಎಷ್ಟು ಬುದ್ಧಿ ಹೇಳಿದರೂ ಕೇಳದೇ ಸದಾ ಗಾಂಜಾ ಸೇವಿಸುತ್ತಿದ್ದರಿಂದ ತಾಯಿ ಕಂಗೆಟ್ಟು ಮಗನ ಪಾಲಿಗೆ ಭದ್ರಕಾಳಿಯಾಗಿ ಮಾರ್ಪಟ್ಟ ಘಟನೆ ತೆಲಂಗಾಣದಲ್ಲಿ ನಡೆದಿದೆ. ಇಲ್ಲಿನ ಸೂರ್ಯಪೇಟೆಯಲ್ಲಿ ಗಾಂಜಾ ಸೇವಿಸುತ್ತಿದ್ದ ಮಗನನ್ನು ಕಂಬಕ್ಕೆ ಕಟ್ಟಿದ ತಾಯಿ, ಆತನ ಕಣ್ಣಿಗೆ ಕಾರದ ಪುಡಿ ಹಾಕಿ ಶಿಕ್ಷೆ ಕೊಟ್ಟಿದ್ದಾಳೆ. ನಂತರ ಆತನನ್ನು ಚೆನ್ನಾಗಿ ಥಳಿಸಿದ್ದಾಳೆ.

ಮಗ ಗಾಂಜಾ ವ್ಯಸನಿ ಆಗಿರುವುದನ್ನು ನೋಡಿ ಸಹಿಸಲಾಗದೇ ತಾಯಿ ಈ ಕಠೋರ ಶಿಕ್ಷೆ ಕೊಟ್ಟಿದ್ದಾಳೆ. ಗಾಂಜಾ ಸೇವನೆ ನಿಲ್ಲಿಸುವುದಾಗಿ ಭರವಸೆ ನೀಡಿದ ನಂತರ ಆತನನ್ನು ಬಿಡಲಾಗಿದೆ. ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಿಗದಿತ ಸಮಯವನ್ನು ಮೀರಿ ಪಬ್‌ನಲ್ಲಿ ಪಾರ್ಟಿ ಮಾಡುತ್ತಿದ್ದ ಆರೋಪದ ಮೇರೆಗೆ ಟಾಲಿವುಡ್ ಮೆಗಾಸ್ಟಾರ್‌ ನಟ ಚಿರಂಜೀವಿ ಅವರ ತಮ್ಮ ನಾಗ ಬಾಬು ಪುತ್ರಿ ನಿಹಾರಿಕ ಕೊನಿಡೇಲಾ ಹಾಗೂ ಗಾಯಕ ರಾಹುಲ್ ಸಿಪ್ಲಿಗುಂಜ್ ಸೇರಿದಂತೆ 150 ಜನರನ್ನು ಪೊಲೀಸರು ಬಂಧಿಸಿದ್ದರು.

Share Post