International

ನ್ಯೂಯಾರ್ಕ್‌ನ ಪ್ರಮುಖ ರಸ್ತೆಗೆ ಗಣೇಶ ಟೆಂಪಲ್‌ ಸ್ಟ್ರೀಟ್‌ ಎಂದು ನಾಮಕರಣ

ನ್ಯೂಯಾರ್ಕ್: ನ್ಯೂಯಾರ್ಕ್‌ನಲ್ಲಿ ಪ್ರಮುಖ ರಸ್ತೆಯೊಂದಕ್ಕೆ ಹಿಂದೂ ದೇವರ ಹೆಸರನ್ನಿಡಲಾಗಿದೆ. 1977ರಲ್ಲಿ ಸ್ಥಾಪಿತವಾದ ಉತ್ತರ ಅಮೆರಿಕದ ಹಿಂದೂ ಟೆಂಪಲ್ ಸೊಸೈಟಿಯ ಶ್ರೀ ಮಹಾ ವಲ್ಲಭ ಗಣಪತಿ ದೇವಸ್ಥಾನವು ಅಮೆರಿಕದ ಮೊದಲ ಮತ್ತು ಅತ್ಯಂತ ಹಳೆಯ ಹಿಂದೂ ದೇವಾಲಯವೆಂದು ಪರಿಗಣಿಸಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಈ ದೇಗುಲ ಇರುವ ರಸ್ತೆಗೆ ಗಣೇಶ ಟೆಂಪಲ್‌ ಸ್ಟ್ರೀಟ್‌ ಎಂದು ಹೆಸರಿಡಲಾಗಿದೆ.

ಅಧಿಕೃತವಾಗಿ ಗಣೇಶ ಟೆಂಪಲ್‌ ಸ್ಟ್ರೀಟ್‌ ಎಂದು ಅಲ್ಲಿನ ಸ್ಥಳೀಯ ಆಡಳಿತ ನಾಮಕರಣ ಮಾಡಿದೆ. ಹೀಗಾಗಿ ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ಹಿಂದುಗಳಿಗೆ ಇದೊಂದು ಭಾವನಾತ್ಮಕ ಕ್ಷಣವಾಗಿ ಮಾರ್ಪಟ್ಟಿತ್ತು.  ಈ ಪ್ರಸಿದ್ಧ ದೇವಾಲಯವು ಕ್ವೀನ್ಸ್ ಕೌಂಟಿಯ ಫ್ಲಶಿಂಗ್‌ನಲ್ಲಿದೆ. ಬೀದಿ ಫಲಕವನ್ನು ಅನಾವರಣಗೊಳಿಸಿದ ವಿಶೇಷ ಸಮಾರಂಭದಲ್ಲಿ ನ್ಯೂಯಾರ್ಕ್‌ನ ಭಾರತದ ಕಾನ್ಸುಲ್ ಜನರಲ್ ರಣಧೀರ್ ಜೈಸ್ವಾಲ್, ಕ್ವೀನ್ಸ್ ಬರೋ ಅಧ್ಯಕ್ಷ ಡೊನೊವನ್ ರಿಚರ್ಡ್ಸ್, ನ್ಯೂಯಾರ್ಕ್ ನಗರದ ಮೇಯರ್ ಎರಿಕ್ ಆಡಮ್ಸ್ , ಇಂಡೊ-ಅಮೆರಿಕನ್ ಸಮುದಾಯದ ಸದಸ್ಯ ದಿಲೀಪ್ ಚೌಹಾಣ್ ಉಪಸ್ಥಿತರಿದ್ದರು.

Share Post