ರಾಜ್ಯದಲ್ಲಿ ಹೆಚ್ಚುತ್ತಿರುವ ಕೋಮುವಾದ; ಕಿರಣ್ ಮಜುಂದಾರ್ ಶಾ ಆಂತಕ
ಬೆಂಗಳೂರು: ಕರ್ನಾಟಕದಲ್ಲಿ ಕೋಮುವಾದ ಹೆಚ್ಚುತ್ತಿದೆ. ಅದು ಐಟಿಬಿಟಿ ಕ್ಷೇತ್ರಕ್ಕೂ ಕಾಲಿಟ್ಟರೆ ಅಪಾಯ. ಅದು ನಮ್ಮ ಜಾಗತಿಕ ನಾಯಕತ್ವವನ್ನು ನಾಶಮಾಡಲಿದೆ ಎಂದು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಎಲ್ಲ ಸಮುದಾಯದವರನ್ನೂ ಒಳಗೊಂಡಿರುವ ದೇಶ ನಮ್ಮದು. ರಾಜ್ಯದಲ್ಲೂ ಕೂಡಾ ಎಲ್ಲರನ್ನೂ ಒಳಗೊಂಡ ಆರ್ಥಿಕ ಅಭಿವೃದ್ಧಿಯನ್ನು ರೂಪಿಸಲಾಗಿದೆ. ಇಲ್ಲಿ ಕೋಮುವಾದಕ್ಕೆ ಅನುಮತಿ ನೀಡಬಾರದು ಎಂದು ಕಿರಣ್ ಮಜುಂದಾರ್ ಶಾ ಹೇಳಿದ್ದಾರೆ.
ರಾಜ್ಯದಲ್ಲಿ ಕೋಮುವಾದ ಹೆಚ್ಚುತ್ತಿದೆ. ಅದು ಒಂದು ವೇಳೆ ಐಟಿಬಿಟಿ ಕ್ಷೇತ್ರಕ್ಕೂ ಕಾಲಿಟ್ಟರೆ, ಅದು ನಮ್ಮ ಜಾಗತಿಕ ನಾಯಕತ್ವವನ್ನು ನಾಶಮಾಡಲಿದೆ. ಬಸವರಾಜ ಬೊಮ್ಮಾಯಿಯವರೇ, ದಯವಿಟ್ಟು ಕೋಮುಗಳ ನಡುವಿನ ವಿಭಜನೆಯನ್ನು ತಡೆಯಿರಿ ಎಂದು ಕಿರಣ್ ಮಜುಂದಾರ್ ಶಾ ಒತ್ತಾಯಿಸಿದ್ದಾರೆ.