Districts

ರಾಜ್ಯದಲ್ಲಿ ಇಸ್ಲಾಂ ವ್ಯಾಪಾರ, ಹಲಾಲ್ ಬ್ಯಾನ್‌ ವಿಚಾರಕ್ಕೆ ಕುಮಾರಸ್ವಾಮಿ ಕಿಡಿ

ರಾಮನಗರ: ರಾಜ್ಯದಲ್ಲಿ ಹಿಂದೂ-ಮುಸ್ಲಿಂ ನಡುವೆ ಒಂದೊಂದೇ ವಿವಾದಗಳು ತಲೆದೂರುತ್ತಿವೆ. ಹಿಜಾಬ್‌ ವಿವಾದ, ಧರ್ಮ ವ್ಯಾಪಾರ ಇದೀಗ ಹಲಾಲ್‌ v/s ಜಟ್ಕಾ ಕಟ್‌ ಎಂಬ ಆಂದೋಲನಗಳು ಶುರುವಾಗಿವೆ. ಈ ಬಗ್ಗೆ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಮುಸ್ಲಿಂ ಕುಟುಂಬವೊಂದು 35 ವರ್ಷಗಳಿಂದ ಹಿಂದೂ ಮೂರ್ತಿಗಳನ್ನು ಕೆತ್ತನೆ ಮಾಡುತ್ತಿದ್ದಾರೆ.

ಕೋಲಾರದ ಶಿವಾರದಲ್ಲಿ ಈ ಕುಟುಂಬ ಮೂರ್ತಿ ಕೆತ್ತನೆ ಮಾಡ್ತಿದಾರೆ. ಮತ್ತೆ ಈ ಕುಟುಂಬವನ್ನು ಯಾವಾಗ ಬಹಿಷ್ಕಾರ ಮಾಡ್ತೀರಪ್ಪಾ..? ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ನಮ್ಮ ಸ್ಪೀಕರ್‌ ಸದನದ ಪೀಠದಲ್ಲಿ ಕೂತು ನಾವೆಲ್ಲರೂ ಆರ್‌ಎಸ್‌ಎಸ್‌ ಒಪ್ಪುತ್ತೇವೆ ಅಂತ ಹೇಳ್ತಾರಲ್ಲ. ಪೀಠದಲ್ಲಿ ಕುಳಿತು ಹೀಗೆ ಹೇಳಲು ನಾಚಿಕೆ ಆಗಬೇಕು ಎಂದು ಹೆಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share Post