ಬಿರ್ಭೂಮ್ ಹಿಂಸಾಚಾರದಲ್ಲಿ ಮೃತರ ಕುಟುಂಬಸ್ಥರಿಗೆ 5ಲಕ್ಷ ಪರಿಹಾರ, ಉದ್ಯೋಗ: ಮನೆ ನಿರ್ಮಾಣಕ್ಕೆ 2ಲಕ್ಷ ಆರ್ಥಿಕ ನೆರವು
ಪಶ್ಚಿಮ ಬಂಗಾಳ: ಟಿಎಂಸಿ ಕಾರ್ಯರ್ತನ ಹತ್ಯೆ ಖಂಡಿಸಿ ದುಷ್ಕರ್ಮಿಗಳು ಮಾಡಿದ ಪಾಪ ಕೃತ್ಯದಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಭೇಟಿ ಮಾಡಿದ್ರು. ಬಿರ್ಭೂಮ್ಗೆ ಭೇಟಿ ನೀಡಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿ ಅವರ ಅಳಲನ್ನು ಕೇಳಿದ್ರು. ಬಳಿಕ ಬಿರ್ಭೂಮ್ ಹಿಂಸಾಚಾರದಲ್ಲಿ ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಚೆಕ್ ಹಸ್ತಾಂತರ ಮಾಡಿದ್ರು.
ಸಂತ್ರಸ್ತ ಮನೆಗಳ ಪುನರ್ ನಿರ್ಮಾಣಕ್ಕೆ 2 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುವುದು ಎಂಬ ಭರವಸೆ ನೀಡಿದ್ರು. ಬೆಂಕಿಯಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ಉದ್ಯೋಗ ಮತ್ತು 5 ಲಕ್ಷ ರೂ ನೀಡಲಾಗುವುದು ಎಂದು ಅವರು ಹೇಳಿದರು. ವಿಪಕ್ಷಗಳ ಟೀಕೆ ಬೆನ್ನಲ್ಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ನಡೆದ ಅನಾಹುತವನ್ನು ಸರಿಮಾಡುವ ಕೆಲಸವನ್ನು ದೀದಿ ಮಾಡಿದ್ರು.
West Bengal CM Mamata Banerjee hands over a cheque of Rs 5 lakhs to the kin of those killed in #Birbhum violence
Financial aid of Rs 2 lakhs will be given for reconstructing affected houses. Families of the 10 people who died in fire will be given a job & Rs 5 lakhs, she says pic.twitter.com/I0HxivywM6
— ANI (@ANI) March 24, 2022