Cinema

‘ದಿ ಕಾಶ್ಮೀರ್ ಫೈಲ್ಸ್ʼ: ಬಜೆಟ್ 15 ಕೋಟಿ..1ವಾರಕ್ಕೆ 100 ಕೋಟಿ.. 200 ಕೋಟಿ ಕಲೆಕ್ಷನ್‌ನತ್ತ ದಾಪುಗಾಲು

ಮುಂಬೈ:  ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ʻದಿ ಕಾಶ್ಮೀರ್ ಫೈಲ್ಸ್ʼ 1990 ರಲ್ಲಿ ಕಾಶ್ಮೀರದಲ್ಲಿ ಹಿಂದೂ ಪಂಡಿತರು ಮತ್ತು ಹಿಂದೂಗಳ ಹತ್ಯಾಕಾಂಡವನ್ನು ಆಧರಿಸಿದ ಚಿತ್ರ. ಈ ಚಿತ್ರ ಮಾರ್ಚ್ 11 ರಂದು ದೇಶಾದ್ಯಂತ ಬಿಡುಗಡೆಯಾಗಿತ್ತು. ಕೇವಲ 15 ಕೋಟಿ ಬಜೆಟ್ ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ತೆರೆಕಂಡಿತ್ತು. ಮೊದಲ ದಿನವೇ ದೇಶಾದ್ಯಂತ ಕೇವಲ 300 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಮೊದಲ ದಿನವೇ ಚಿತ್ರ 3.5 ಕೋಟಿ ಗಳಿಸಿದೆ.

ಆ ನಂತರ ಬರೀ ಬಾಯಿಮಾತಿನಿಂದಲೇ ಸಿನಿಮಾ ಹೆಚ್ಚು ಜನಪ್ರಿಯತೆ ಗಳಿಸಿತು. ನರೇಂದ್ರ ಮೋದಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ಚಿತ್ರವನ್ನು ಶ್ಲಾಘಿಸಿದ ನಂತರ ಒಮ್ಮೆಲೆ ಜನಪ್ರಿಯವಾಯಿತು. ಎರಡನೇ ದಿನ ಚಿತ್ರಕ್ಕೆ ಇನ್ನೂ ಕೆಲವು ಥಿಯೇಟರ್ ಗಳಲ್ಲಿ ತೆರೆ ಕಂಡಿತು. ಎರಡನೇ ದಿನ 8 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ದಿನದಿಂದ ದಿನಕ್ಕೆ ಸಿನಿಮಾ ಜನಪ್ರಿಯತೆ ಹೆಚ್ಚಾದಂತೆ ಚಿತ್ರಮಂದಿರಗಳೂ ಹೆಚ್ಚಾದವು. ಮೂರನೇ ದಿನದಿಂದ ದೇಶಾದ್ಯಂತ ಸುಮಾರು 2000 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. ಮೂರನೇ ದಿನ ಚಿತ್ರ 15 ಕೋಟಿ ಕಲೆಕ್ಷನ್ ಮಾಡಿದೆ.

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮೊದಲ ವಾರದಲ್ಲಿ ಸುಮಾರು 100 ಕೋಟಿ ರೂ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ಅನ್ನು ಅಲ್ಲಾಡಿಸಿದೆ. ಕೇವಲ 15 ಕೋಟಿಯಿಂದ ತಯಾರಾದ ಈ ಚಿತ್ರ ಮೊದಲ ವಾರದಲ್ಲೇ 100 ಕೋಟಿ ಕಲೆಕ್ಷನ್ ಮಾಡಿ ಬಾಲಿವುಡ್ ಗೆ ಶಾಕ್ ನೀಡಿದೆ. ವಾರ, ದಿನಗಳು ಕಳೆದಂತೆ ಚಿತ್ರದ ಜನಪ್ರಿಯತೆ ಹೆಚ್ಚುತ್ತಲೇ ಇದೆ.

 

ಬಾಲಿವುಡ್ ವಿಮರ್ಶಕರು ಈ ಚಿತ್ರವು 150 ಕೋಟಿ ರುಪಾಯಿಗಳನ್ನು ಸುಲಭವಾಗಿ ಸಂಗ್ರಹಿಸುತ್ತದೆ ಎಂದು ಹೇಳಿದ್ರೆ, ಇನ್ನೂ ಕೆಲವರು ಈ ವಾರಾಂತ್ಯದೊಳಗೆ ಸುಲಭವಾಗಿ 200 ಕೋಟಿ ರು ಕಲೆಕ್ಷನ್ ಮಾಡಲಿದೆ ಎಂದು ಹೇಳುತ್ತಾರೆ. ಮಾರ್ಚ್ 25ಕ್ಕೆ ‘RRR’ ಸಿನಿಮಾ ತೆರೆಗೆ ಬರುತ್ತಿದೆ. ಅಲ್ಲಿಯವರೆಗೂ ಈ ಚಿತ್ರಗಳ ಕಲೆಕ್ಷನ್ ಗಳಿಗೆ ಧೋಕಾ ಇಲ್ಲ ಎನ್ನುತ್ತಿವೆ ಚಿತ್ರ ಮೂಲಗಳು. ಕೆಲವೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಈಗ ಬಹುತೇಕ ಚಿತ್ರಮಂದಿರಗಳಲ್ಲಿ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ 200 ಕೋಟಿ ಕಲೆಕ್ಷನ್‌ ಮಾಡುವತ್ತ ದಾಪುಗಾಲು ಹಾಕುತ್ತಿದೆ.

Share Post