Bengaluru

ಮದುವೆಯಾಗು ಎಂದಿದ್ದಕ್ಕೆ ಪ್ರೇಯಸಿ ಮೇಲೆ ಪೆಟ್ರೋಲ್‌ ಸುರಿದು ಕೊಂದ ಪಾಪಿ:ಪೊಲೀಸರಿಂದ ತನಿಖೆ

ಬೆಂಗಳೂರು: ಪ್ರೀತಿ ಮಾಯೆ ಹುಷಾರು..ಕಣ್ಣೀರ್‌ ಮಾರೋ ಬಜಾರು ಅಂತ ಸುಮ್ಮನೆ ಹೇಳಿಲ್ಲ. ಪ್ರೀತಿ ಹಿಂದ ಹೋಗಿ ಯುವತಿಯೊಬ್ಬಳು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಮಗಳನ್ನು ಕಳೆದುಕೊಂಡು ಹೆತ್ತವರು ಕಣ್ಣೀರಾಕುತ್ತಿದ್ದಾರೆ. ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿ ಮಾಡಿ ಮದುವೆಯಾಗು ಎಂದಿದ್ದಕ್ಕೆ ಪ್ರೇಯಸಿ ಮೇಲೆ ಪೆಟ್ರೋಲ್‌ ಸಯರಿದು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಘಟನೆ ಬಗ್ಗೆ ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್‌ ಜೋಶಿ ಮಾಹಿತಿ ನೀಡಿದ್ದಾರೆ.

ಮೃತ ಯುವತಿ ಹಾಗೂ ತುವಕ ಪರಸ್ಪತ ಪ್ರೀತಿಸಿದ್ದರಂತೆ ಯುವತಿ ಮದುವೆಯಾಗು ಎಂದಿದ್ದಕ್ಕೆ ಹತ್ಯೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖವಾಗಿದೆ ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ತೆರಳಿದ ಪೊಲೀಸರಿಗೆ ಯುವತಿ ಪೋಷಕರು ದೂರು ನೀಡಲು ತಡಮಾಡಿದ್ದಾರೆ. ಇದೀಗ ಯುವತಿ ಮೃತಪಟ್ಟಿದ್ದು, ನನ್ನ ಮಗಳ ಕೊಲೆಯಾಗಿದೆ ಎಂದು ಹೆತ್ತವರು ಆರೋಪ ಮಾಡ್ತಿದಾರೆ. ಹೀಗಾಗಿ ಸೆಕ್ಷನ್ 302ರಡಿ ಕೇಸ್ ಮಾಡಿ ತನಿಖೆ ಮಾಡಿ ಆರೋಪಿ ಯುವಕನನ್ನ ಪತ್ತೆ ಹಚ್ಚುತ್ತೇವೆ ಎಂದು ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಜೋಶಿ ಹೇಳಿಕೆ ನೀಡಿದ್ದಾರೆ.

ಏನಾದ್ರೂ ಸರಿ ಪ್ರೀತಿ ಹಿಂದೆ ಹೋಗಿ ತನ್ನ ಪ್ರಾಣವನ್ನು ಕಳದುಕೊಂಡು ಹೆತ್ತವರನ್ನು ಅನಾಥರನ್ನಾಗಿ ಮಾಡಿ ಅವರ ಪಾಲಿಗೆ ಕಣ್ಣೀರನ್ನು ಉಳಿಸಿ ಹೋಗಿದ್ದಾಳೆ. ಇತ್ತ ಪ್ರೀತಿಸಿದವಳನ್ನೇ ಕೊಂದು ಯಾರ ಕೈಗೂ ಸಿಗದೆ ಪ್ರಿಯಕರ ನಾಪತ್ತೆಯಾಗಿದ್ದಾನೆ.

Share Post