National

ಯುದ್ಧ ನಿಲ್ಲಿಸುವಂತೆ ಪುಟಿನ್‌ಗೆ ನಾವು ಆದೇಶ ನೀಡಬಹುದಾ..?-ಸುಪ್ರೀಂಕೋರ್ಟ್‌ ಸಿಜೆಐ ಪ್ರಶ್ನೆ

ದೆಹಲಿ: “ಉಕ್ರೇನ್‌ನಲ್ಲಿ ಯುದ್ಧ ಪರಿಸ್ಥಿತಿ ತುಂಬಾ ದುಃಖಕರವಾಗಿದೆ ಅದು ನಮಗೂ ತಿಳಿದಿದೆ. ಅದಕ್ಕೆ ನಾವು ಏನ್‌ ಮಾಡಬಹುದು? ರಷ್ಯಾದ ಅಧ್ಯಕ್ಷ ಪುಟಿನ್ಗೆ ಉಕ್ರೇನ್ ಮೇಲಿನ ಯುದ್ಧವನ್ನು ನಿಲ್ಲಿಸುವಂತೆ ಆದೇಶಿಸಬಹುದೇ?” ಎಂದು ಸುಪ್ರೀಂಕೋರ್ಟ್‌ ಸಿಜೆಐ ಎನ್.ವಿ.ರಮಣ್ ಅವರು ಪ್ರಶ್ನೆ ಮಾಡಿದ್ರು. ಇಂದು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಈ ಪ್ರಶ್ನೆ ಮಾಡಿದ್ದಾರೆ.

ಗುರುವಾರ (ಮಾರ್ಚ್ 3, 2022) ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಯ ಕುಟುಂಬವೊಂದು ಉಕ್ರೇನ್‌ನಲ್ಲಿ ಸಿಕ್ಕಿಬಿದ್ದ ವಿದ್ಯಾರ್ಥಿಗಳ ದುಃಸ್ಥಿತಿಯ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಮೊಲ್ಡೊವಾ-ರೊಮೇನಿಯಾ ಗಡಿಯಲ್ಲಿ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಅವರನ್ನು ಕರೆತರುವಂತೆ ಮನವಿ ಮೂಲಕ ಮೊಕದ್ದಮೆ ಹೂಡಲಾಗಿದೆ. ಈ ಪ್ರಕರಣದ ವಿಚಾರಣೆಯನ್ನು ಸಿಜೆಐ ಎನ್‌ವಿ ರಮಣ ನೇತೃತ್ವದ ಪೀಠ ನಡೆಸಿ, ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಕೇಂದ್ರ ಸರ್ಕಾರ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದೆ ಎಂದು ಸಿಜೆಐ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ದುಸ್ಥಿತಿಗೆ ಸಿಜೆ ಸಹಾನುಭೂತಿ ವ್ಯಕ್ತಪಡಿಸಿದರು. ಉಕ್ರೇನ್‌ನಲ್ಲಿನ ಬೆಳವಣಿಗೆಗಳು ತೀವ್ರವಾಗಿವೆ.  ಆದರೆ  ಯುದ್ಧವನ್ನು ನಿಲ್ಲಿಸುವಂತೆ ನಾನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಆದೇಶ ಮಾಡುವುದಕ್ಕೆ ಸಾಧ್ಯವೇ..? ಎಂದು ಸಿಜೆಐ ಪ್ರಶ್ನಿಸಿದ್ದಾರೆ.

ಒಡೆಸ್ಸಾ ವಿಶ್ವವಿದ್ಯಾನಿಲಯದ ಸುಮಾರು 250 ಭಾರತೀಯ ವಿದ್ಯಾರ್ಥಿಗಳು ಮೊಲ್ಡೊವಾ-ರೊಮೇನಿಯಾ ಗಡಿಯನ್ನು ದಾಟಿದ್ದಾರೆ ಎಂದು 24 ವರ್ಷದ ಫಾತಿಮಾ ಅಹಾನಾ ಎಂಬ ಮಹಿಳಾ ವೈದ್ಯಕೀಯ ವಿದ್ಯಾರ್ಥಿನಿಯ ಕುಟುಂಬವು ಅರ್ಜಿಯಲ್ಲಿ ತಿಳಿಸಿದೆ. ಈ ವಿದ್ಯಾರ್ಥಿಗಳು ರೊಮೇನಿಯಾಗೆ ತೆರಳಲು ಅನುಮತಿಯಿಲ್ಲದೆ ಆರು ದಿನಗಳ ಕಾಲ ಅಲ್ಲಿ ಸಿಕ್ಕಿಬಿದ್ದಿದ್ದಾರೆ ಕೋರ್ಟ್‌ ಮೂಲಕ ಅವರು ಗಡಿ ದಾಟಲು ಅನುಮತಿ ನೀಡಬೇಕೆಂದು ಮನವಿ ಮಾಡಿದ್ದಾರೆ.

ಏರ್ ಇಂಡಿಯಾ ವಿಮಾನವನ್ನು ಹತ್ತಲು ಉಕ್ರೇನ್‌ನಿಂದ ರೊಮೇನಿಯಾಗೆ ಹೋಗುವ ಮಾರ್ಗದಲ್ಲಿ ಮೊಲ್ಡೊವಾದಲ್ಲಿನ ಚೆಕ್‌ಪಾಯಿಂಟ್ ಅನ್ನು ದಾಟಬೇಕಾಗಿದೆ. ಅದಕ್ಕೆ ಕೋರ್ಟ್ನಿಂದ ಸುರಕ್ಷಿತ ಅನುಮತಿಯನ್ನು ನೀಡಬೇಕೆಂದು ಅರ್ಜಿದಾರರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ. ವಿದ್ಯಾರ್ಥಿಗಳು ಉಕ್ರೇನಿಯನ್ ಗಡಿ ಮೊಲ್ಡೊವಾ ದಾಟಲು ಅಲ್ಲಿನ ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ. ಈ ಬಗ್ಗೆ  ಭಾರತೀಯ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

Share Post