Districts

ಮತ್ತಿಬ್ಬರು ರಾಜ್ಯದ ವಿದ್ಯಾರ್ಥಿನಿಯರ ಸಂಪರ್ಕ ಕಡಿತ, ಹೆಚ್ಚಿದ ಆತಂಕ-ಡಿಸಿ ಮಾಹಿತಿ

ಉತ್ತರಕನ್ನಡ:‌ ರಷ್ಯಾ ದಾಳಿ ಎಗ್ಗಿಲ್ಲದೆ ನಡೀತಿದೆ. ಸಿಕ ಸಿಕ್ಕಲೆಲ್ಲಾ ಬಾಂಬ್‌, ಶೆಲ್‌, ಮಿಸೈಲ್‌ಗಳ ದಾಳಿ ನಡೆಯುತ್ತಿದೆ. ಈಗಾಗಲೇ ಉಕ್ರೇನ್‌ನಲ್ಲಿ ಸೈನಿಕರು ಸೇರಿದಂತೆ ನಾಗರೀಕರು ಮೃತಪಟ್ಟಿದ್ದಾರೆ. ಸೇನೆ ಗುರಿಯಾಗಿಸಿ ದಾಳಿ ನಡೆಸುತ್ತಿದ್ದೇವೆ ಎಂದ ರಷ್ಯಾ ಈಗ ನಾಗರೀಕರ ಮೇಲೂ ದಾಳಿ ನಡೆಸುತ್ತಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ಬಾರತೀಯರ ಪರಿಸ್ಥಿತಿ ಶೋಚನೀಯವಾಗಿದೆ. ಅನ್ನ, ನೀರಿಲ್ಲದೆ ಬಂಕರ್‌ಗಳನ್ನು ಆಶ್ರಯ ಪಡೆದಿದ್ದಾರೆ. ಈಗಾಗಲೇ ವಿದ್ಯಾರ್ಥಿಗಳನ್ನು ಏರ್‌ಲಿಫ್ಟ್‌ ಮಾಡುವ ಎಲ್ಲಾ ಕಾರ್ಯಾಚರಣೆಗಳೂ ನಡೆಯುತ್ತಿವೆ. ಈ ನಡುವೆ ನಿನ್ನೆ ಹಾವೇರಿ ಮೂಲದ ನವೀನ್‌ ಎಂಬ ವಿದ್ಯಾರ್ಥಿ ರಷ್ಯಾ ಶೆಲ್‌ ದಾಳಿಗೆ ಬಲಿಯಾಗಿದೆ.

ಈ ನಡುವೆ ರಾಜ್ಯದ ಇಬ್ಬರು ವಿದ್ಯಾರ್ಥಿನಿಯರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಜಿಲ್ಲಾಡಳಿತ ಸೂಚಿಸಿದೆ. ಮುಂಡಗೋಡಿನ ಸ್ನೇಹಾ ಹಾಗೂ ನಾಜಿಯಾ ಸಂಪರ್ಕಕ್ಕೆ ಸಿಗ್ತಿಲ್ಲ ಎಂದು ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕ ಮನೆ ಮಾಡಿದೆ.  ಸ್ವತಃ ರಿಸ್ಕ್‌ ತೆಗೆದುಕೊಂಡು ರೊಮೇನಿಯಾ ಗಡಿ ಪ್ರವೇಶ ಮಾಡುವಂತೆ ಕೇಂದ್ರ ಗೃಹ ಇಲಾಖೆಯ ಸೂಚನೆ ಮೇರೆಗೆ ವಿದ್ಯಾರ್ಥಿಗಳು ತೆರಳಿದ್ದಾರೆ. ಇದೀಗ ನಿನ್ನೆ ರಾತ್ರಿಯಿಂದ ವಿದ್ಯಾರ್ಥಿಗಳ ಸಂಪರ್ಕ ಕಡಿತಗೊಂಡಿದೆ. ವಿಚಾರ ತಿಳಿದು ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕ ಮನೆ ಮಾಡಿದೆ. ಸಂಪರ್ಕಿಸಲು ಪ್ರಯತ್ನ ಪಟ್ಟ ಎಲ್ಲಾ ಹಾದಿಗಳು ವಿಫಲವಾಗಿವೆ. ಜಿಲ್ಲಾಡಳಿತ, ಕೇಂದ್ರ ಗೃಹ ಇಲಾಖೆಯ ಕಡೆಯಿಂದಲೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ತಿಳಿಸಿದ್ದಾರೆ.

ಉಕ್ರೇನ್‌ನಿಂದ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ. ಈ ನಡುವೆ ಉಕ್ರೇನ್‌ನಲ್ಲಿ ರಷ್ಯಾ ದಾಳಿ ಹೆಚ್ಚಾಗಿದೆ. ಸಿಕ್ಕ ಸಿಕ್ಕಲೆಲ್ಲಾ ಬಾಂಬ್‌ ದಾಳಿ ನಡೆಸುತ್ತಿರುವುದರಿಂದ ಉಕ್ರೇನ್‌

Share Post