Cinema

ಪ್ರಭಾಸ್‌ ಫ್ಯಾನ್ಸ್‌ ಗೆಟ್‌ ರೆಡಿ-ಮಾರ್ಚ್‌ ಎರಡಕ್ಕೆ ಮತ್ತೊಂದು ಟ್ರೈಲರ್‌ ರಿಲೀಸ್

ಹೈದರಾಬಾದ್:‌ ಪ್ಯಾನ್ ಇಂಡಿಯಾ ರೆಬೆಲ್ ಸ್ಟಾರ್ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅವರ ರೋಮ್ಯಾಂಟಿಕ್ ಲವ್ ಸ್ಟೋರಿ ರಾಧೆಶ್ಯಾಮ್ ಮಾರ್ಚ್ 11 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಸಂಕ್ರಾಂತಿಗೆ ಬಿಡುಗಡೆಯಾಗಬೇಕಿತ್ತು ಆದರೆ ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾದ ಕಾರಣ ಕೊನೆಯ ಕ್ಷಣದಲ್ಲಿ ಮುಂದೂಡಲಾಗಿತ್ತು. ಆದರೆ ಈ ಬಾರಿ ಸಮ್ಮರ್ ರಿಲೀಸ್ ಪ್ರಭಾಸ್ ಅಭಿಮಾನಿಗಳಿಗೆ ಟ್ರೀಟ್ ನೀಡುವುದು ಖಚಿತ ಎಂದು ಹೇಳುತ್ತಿರುವ ಮೇಕರ್ಸ್ ಮಾರ್ಚ್ ಎರಡನೇ ವಾರದಲ್ಲಿ ಸಿನಿಮಾತ ತೆರೆಗೆ ಮುಹೂರ್ತ ಇಟ್ಟಿದ್ದಾರೆ.

ಸ್ವಲ್ಪ ತಡವಾಗಿ ಪ್ರಚಾರ ಆರಂಭಿಸಿದ ಮೇಕರ್‌ಗಳು ಸರಣಿ ಅಪ್‌ಡೇಟ್‌ಗಳನ್ನು ನೀಡಿ ಅಭಿಮಾನಿಗಳ ಸಂತಸಕ್ಕೆ ಕಾರಣರಾಗಿದ್ದಾರೆ. ಪ್ರೇಮಿಗಳ ದಿನದಂದು ಗ್ಲಿಂಪ್ಸಸ್ ಅನ್ನು ಬಿಡುಗಡೆ ಮಾಡಿದ ರಾಧೇಶ್ಯಾಮ್ ಚಿತ್ರತಂಡ ಈ ರಾತಲೆ ವೀಡಿಯೊ ಹಾಡನ್ನು ಬಿಡುಗಡೆ ಮಾಡಿದೆ, ಈ ಹಾಡು ಚಿತ್ರದ ಬಗ್ಗೆ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಒನ್ ಸೈಡ್ ಇಂಟರ್ವ್ಯೂ ಶುರು ಮಾಡಿದ ಮೇಕರ್ಸ್, ಅಭಿಮಾನಿಗಳು ಸಂಭ್ರಮಿಸಲು ಒಮ್ಮತದಿಂದ ಮತ್ತೊಂದು ಗಿಫ್ಟ್ ರೆಡಿ ಮಾಡಿ ಡೇಟ್ ಕೊಟ್ಟಿದ್ದಾರೆ.

ಜನವರಿಯಲ್ಲಿ ರಿಲೀಸ್ ಆಗುವ ಸಂದರ್ಭದಲ್ಲಿ ಟ್ರೇಲರ್ ರಿಲೀಸ್ ಆಗಿತ್ತು.. ಈಗ ಮಾರ್ಚ್ 2ಕ್ಕೆ ರಾಧೇಶ್ಯಾಮ್ ಸಿನಿಮಾ ಮತ್ತೊಂದು ಟ್ರೈಲರ್ ರಿಲೀಸ್ ಮಾಡಲು ಸಜ್ಜಾಗಿದೆ. ಮಾರ್ಚ್ 2 ರಂದು ಮಧ್ಯಾಹ್ನ 3 ಗಂಟೆಗೆ ಟ್ರೇಲರ್ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟರ್ ಮೂಲಕ ಘೋಷಿಸಿದ್ದಾರೆ. ಈಗಾಗಲೇ ಹಾಡುಗಳು ಮತ್ತು ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಇದೊಂದು ಫೀಲ್ ಗುಡ್ ಲವ್ ಸ್ಟೋರಿ ಅಂತಿದಾರೆ. ಪ್ರಭಾಸ್ ಕೂಲ್ ಬಾಯ್ ಆಗಿ ನೋಡಲು ಬಹಳ ದಿನಗಳಿಂದ ಕಾಯುತ್ತಿದ್ದವರಿಗೆ ಈ ಟ್ರೇಲರ್ ಹಬ್ಬವಾಗಲಿದೆ.

Share Post