ರಷ್ಯಾ ಉಕ್ರೇನ್‌ನಿಂದ ತಕ್ಷಣ ತನ್ನ ಸೇನೆ ಹಿಂಪಡೆಯಲಿ; ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಆಗ್ರಹ
ಕೀವ್; ರಷ್ಯಾ ಉಕ್ರೇನ್‌ನಿಂದ ತಕ್ಷಣ ತನ್ನ ಸೇನೆ ಹಿಂಪಡೆಯಲಿ. ರಷ್ಯಾ ಕೂಡಲೇ ಕದನವಿರಾಮ ಘೋಷಿಸಲಿ ಎಂದು ರಷ್ಯಾ-ಉಕ್ರೇನ್ ಶಾಂತಿ ಸಭೆಗೂ ಮುನ್ನ ಉಕ್ರೇನ್ ಅಧ್ಯಕ್ಷ ವ್ಲೋಡೊಮಿರ್ ಝೆಲೆನ್‌ಸ್ಕಿ ಆಗ್ರಹಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು ಉಕ್ರೇನ್‌ಗೆ ತಕ್ಷಣ ಇಯು ಸದಸ್ಯತ್ವವನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಉಕ್ರೇನ್‌ಗೆ ಎನ್ಎಟಿಒ ಮೈತ್ರಿಕೂಟ ದೇಶಗಳು ಉಕ್ರೇನ್‌ಗೆ ಸೇನಾ ನೆರವು ಹಾಗೂ ಆರ್ಥಿಕ ನೆರವು ನೀಡುತ್ತಿವೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದೆ. ಈವರೆಗೆ ರಷ್ಯಾದ 4,500 ಯೋಧರು ಹತರಾಗಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ. ಇನ್ನು ಉಕ್ರೇನ್‌ನಲ್ಲಿ ಮಾನವೀಯ ಕಾರ್ಯಾಚರಣೆ ಹೆಚ್ಚಿಸಿ, ಅವರ ಅಗತ್ಯದ ಸಮಯದಲ್ಲಿ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಹೇಳಿಕೆ ನೀಡಿದ್ದಾರೆ. ಉಕ್ರೇನ್‌ನಲ್ಲಿ ರಷ್ಯಾ ಮಿಲಿಟರಿ ಕಾರ್ಯಾಚರಣೆ ಉಲ್ಬಣವಾಗಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಿಸುತ್ತಿದೆ ಎಂದೂ ಅವರು ಹೇಳಿದ್ದಾರೆ.