International

ಯುದ್ಧ ಘೋಷಣೆ ಬೆನ್ನಲ್ಲೇ ಪಾಕ್‌ ಪ್ರಧಾನಿ ರಷ್ಯಾ ಪ್ರವಾಸ: ಮಧ್ಯ ಪ್ರವೇಶಿಸುವಂತೆ ಮೋದಿಗೆ ಉಕ್ರೇನ್‌ ಮನವಿ

ರಷ್ಯಾ/ಉಕ್ರೇನ್: ರಷ್ಯಾ ಹಾಗೂ ಉಕ್ರೇನ್‌ ನಡುವಿನ ವಾರ್‌ ಘೋಷಣೆ ಬೆನ್ನಲ್ಲೇ ಕಿತಾಪತಿ ಪಾಕಿಸ್ತಾನ್‌ ಪ್ರಧಾನಿ ಇಮ್ರಾನ್‌ ಖಾನ್‌ ರಷ್ಯಾ ಪ್ರವಾಸ ಕೈಗೊಂಡಿದ್ದಾರೆ. ಪಾಕ್‌ ಈ ನೀತಿ ವಿರುದ್ಧ ಅಮೆರಿಕಾ ಕಿಡಿ ಕಾರಿದೆ. ಉಕ್ರೇನ್‌ನಲ್ಲಿ ರಷ್ಯಾ ಅನಾಚಾರಗಳ ವಿರುದ್ಧ ಧ್ವನಿ ಎತ್ತಬೇಕು, ಅದು ಬಿಟ್ಟು ಪ್ರವಾಸ ಕೈಗೊಂಡಿದ್ದೀರಾ ಎಂದು ತರಾಟೆ ತೆಗದುಕೊಂಡಿದೆ. ರಷ್ಯಾದ ಕ್ರಮಗಳಿಗೆ ಆಕ್ಷೇಪ ವ್ಯಕ್ತಪಡಿಸುವುದು ಎಲ್ಲರ ಕರ್ತವ್ಯ. ಪಾಕ್‌ ಪ್ರಧಾನಿ ರಷ್ಯಾಗೆ ತೆರಳುತ್ತಿರುವುದು ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಅಮೆರಿಕಾದ ವಕ್ತಾರ ನೆಡ್‌ ಪ್ರೈಸ್‌ ಹೇಳಿದ್ದಾರೆ.

ರಷ್ಯಾ ಯುದ್ಧದ ವಿಚಾರವಾಗಿ ಮಧ್ಯಪ್ರವೇಶಿಸುವಂತೆ ಭಾರತಕ್ಕೆ ಸಂದೇಶ ರವಾನೆಯಾಗಿದೆ. ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಘೋಷಣೆ ಮಾಡಿರುವುದರಿಂದ ರಷ್ಯಾ ಅಧ್ಯಕ್ಷರ ಜೊತೆ ಚರ್ಚಿಸಲು ಪ್ರಧಾನಿ ಮೋದಿಗೆ ಉಕ್ರೇನ್‌ ರಾಯಭಾರಿ ಮನವಿ ಮಾಡಿದ್ದಾರೆ. ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.

Share Post